×
Ad

ದಮಾಮ್: ಲಾಕ್ ಡೌನ್ ನಿಂದ ಸಂಕಷ್ಟಕ್ಕೊಳಗಾದ ಕಾರ್ಮಿಕರಿಗೆ ಐಎಸ್ಎಫ್ ವತಿಯಿಂದ ಆಹಾರ ಕಿಟ್ ವಿತರಣೆ

Update: 2020-04-08 16:08 IST

ದಮಾಮ್: ಸೌದಿ ಅರೇಬಿಯಾದ ಅಲ್-ಖೋಬರ್ ನಲ್ಲಿ  ಲಾಕ್ ಡೌನ್ ನಿಂದಾಗಿ   ಕಾರ್ಮಿಕರ ವಸತಿ ಶಿಬಿರವೊಂದರಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯ ಕಾರ್ಮಿಕರಿಗೆ ಇಂಡಿಯನ್ ಸೋಷಿಯಲ್ ಫೋರಮ್ ದಮಾಮ್, ಕರ್ನಾಟಕ ಘಟಕ ಆಹಾರ ಕಿಟ್ ಗಳನ್ನು ವಿತರಿಸಿದೆ.

ಭಾರತದ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ಉತ್ತರ ಪ್ರದೇಶ ಮೂಲದ ಈ ಕಾರ್ಮಿಕರು ಲಾಕ್ ಡೌನ್ ಹಿನ್ನೆಲೆಯಲ್ಲಿ ಆಹಾರ ಸಾಮಗ್ರಿ ಗಳಿಲ್ಲದೆ ಸಂಕಷ್ಟದಲ್ಲಿದ್ದರು. ಈ ಕುರಿತು ಮಾಹಿತಿ ಪಡೆದ ಇಂಡಿಯನ್ ಸೋಷಿಯಲ್ ಫೋರಮ್ ನಾಯಕರು ಶಿಬಿರಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.

ದಾನಿಗಳ ನೆರವಿನೊಂದಿಗೆ  ಐ ಎಸ್ ಎಫ್ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಶಿಬಿರದಲ್ಲಿ ವಿತರಿಸಿದೆ. ಇಂಡಿಯನ್ ಸೋಷಿಯಲ್ ಫೋರಮ್, ದಮಾಮ್, ಕರ್ನಾಟಕ ರಾಜ್ಯ ಘಟಕ ಕಿಟ್ ವಿತರಣೆಗೆ ನೆರವಾದ ದಾನಿಗಳಿಗೆ ಕೃತಜ್ಞತೆ ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News