×
Ad

ದಿನೇಶಾ ದೇವ್‌ನರೈನ್ ಆಫ್ರಿಕಾದ ಅಂಡರ್-19 ತಂಡದ ಕೋಚ್

Update: 2020-04-08 17:05 IST

ಜೋಹಾನ್ಸ್‌ಬರ್ಗ್, ಎ.7: ದಕ್ಷಿಣ ಆಫ್ರಿಕಾದ ಮಾಜಿ ಆಲ್‌ರೌಂಡರ್ ದಿನೇಶಾ ದೇವ್‌ನರೈನ್ ಅವರು ಅಂಡರ್ -19 ಮತ್ತು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್‌ಎ) ಮಹಿಳಾ ರಾಷ್ಟ್ರೀಯ ಅಕಾಡಮಿ ಮುಖ್ಯ ತರಬೇತುದಾರರಾಗಿ ನೇಮಕಗೊಂಡಿದ್ದಾರೆ.

2017ರಿಂದ ನ್ಯಾಷನಲ್ ಅಕಾಡಮಿಯ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸುತ್ತಿರುವ ದೇವ್‌ನರೈನ್ ಅವರು ಎಪ್ರಿಲ್ 2020ರಿಂದ ಮೂರು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

 31ರ ಹರೆಯದ ದೇವ್‌ನರೈನ್ 2021ರ ಆರಂಭದಲ್ಲಿ ಬಾಂಗ್ಲಾದೇಶದಲ್ಲಿ ನಡೆಯಲಿರುವ ಉದ್ಘಾಟನಾ ಐಸಿಸಿ ಅಂಡರ್ -19 ವಿಶ್ವಕಪ್ ಮತ್ತು 19 ವರ್ಷದೊಳಗಿನ ತಂಡದ ಪ್ರಗತಿಯನ್ನು ನೋಡಿಕೊಳ್ಳಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಇದು ಒಂದು ಉತ್ತಮ ಸುದ್ದಿಯಾಗಿದೆ. ಕ್ರಿಕೆಟ್‌ನೊಳಗೆ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮಾತ್ರವಲ್ಲದೆ ಮಹಿಳಾ ಕೋಚಿಂಗ್ ಸಿಬ್ಬಂದಿಯನ್ನು ಉನ್ನತೀಕರಿಸುವ ಮೂಲಕ ಉನ್ನತ ಮಟ್ಟದ ಪ್ರದರ್ಶನ ನೀಡುವ ಆಟಗಾರರನ್ನು ತಯಾರು ಮಾಡಲಾಗುತ್ತದೆ ಎಂದು ಸಿಎಸ್‌ಎ ಹಂಗಾಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಜಾಕ್ವೆಸ್ ಫೌಲ್ ತಿಳಿಸಿದರು. ದೇವ್‌ನರೈನ್ 2008ರಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಚೊಚ್ಚಲ ಪ್ರವೇಶ ಮಾಡಿದರು ಮತ್ತು 2016 ರಲ್ಲಿ ನಿವೃತ್ತಿಯಾಗುವ ಮೊದಲು 29 ಏಕದಿನ ಮತ್ತು 22 ಟ್ವೆಂಟಿ-20 ಪಂದ್ಯಗಳನ್ನು ಆಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News