ಕೊರೋನ ರೋಗಿಗಳ ಸೇವೆ ಜೊತೆಗೆ ಕುಟುಂಬವನ್ನು ರಕ್ಷಿಸಲು ಕಾರನ್ನೇ ಮನೆ ಮಾಡಿಕೊಂಡ ವೈದ್ಯ

Update: 2020-04-08 12:50 GMT
Photo: indiatoday.in

ಭೋಪಾಲ್: ನಗರದ ಜೆಪಿ ಆಸ್ಪತ್ರೆಯಲ್ಲಿ ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯ ಡಾ. ಸಚಿನ್ ನಾಯಕ್ ಎಂಬವರು ತಮ್ಮ ಪತ್ನಿ  ಹಾಗೂ ಮಗುವಿಗೆ ತಮ್ಮಿಂದ ಯಾವುದೇ ಆರೋಗ್ಯ ಸಮಸ್ಯೆ ಎದುರಾಗದೇ ಇರಲಿ ಎಂಬ ಎಚ್ಚರಿಕೆಯಿಂದ  ಆಸ್ಪತ್ರೆಯಿಂದ ನೇರವಾಗಿ ಮನೆಗೆ ಮರಳುವುದಿಲ್ಲ. ಬದಲಾಗಿ ತಮ್ಮ ಕಾರಿನೊಳಗೆ ಸೇರಿಕೊಂಡು ಅಲ್ಲೇ ಸಮಯ ಕಳೆಯುತ್ತಾರೆ. ಮುಂದಿನ ಕೆಲ ದಿನಗಳ ಕಾಲ ಅವರು ತಮ್ಮ ಕಾರನ್ನೇ ಮನೆಯಾಗಿಸಲು ನಿರ್ಧರಿಸಿದ್ದಾರೆ.

ಅವರು ತಮ್ಮ ಕಾರನ್ನು ಆಸ್ಪತ್ರೆಯ ಸಮೀಪವೇ ನಿಲ್ಲಿಸಿದ್ದು ಅದರೊಳಗೆ ತಮಗೆ ಅಗತ್ಯ ವಸ್ತುಗಳನ್ನು ಹಾಗೂ ಓದಲು ಪುಸ್ತಕಗಳನ್ನು ತೆಗೆದಿರಿಸಿದ್ದಾರೆ. ಸಮಯ ಸಿಕ್ಕಾಗಲೆಲ್ಲಾ ಪುಸ್ತಕ ಓದುತ್ತಾ ಕುಟುಂಬ ಸದಸ್ಯರೊಂದಿಗೆ ಫೋನ್ ಅಥವಾ ವೀಡಿಯೋ ಕಾಲ್ ಮಾಡಿ ಮಾತನಾಡುತ್ತಾರೆ.

ಕಳೆದೊಂದು ವಾರದಿಂದ ನಾಯಕ್ ತಮ್ಮ ಕಾರಿನಲ್ಲಿಯೇ ವಾಸಿಸುತ್ತಿದ್ದು ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಅವರನ್ನು ಕೊಂಡಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News