ಅದಾನಿ ಫೌಂಡೇಶನ್‌ನಿಂದ ಯುಪಿಸಿಎಲ್ ಪರಿಸರ ಆಹಾರ ಕಿಟ್ ವಿತರಣೆ

Update: 2020-04-08 15:32 GMT

ಉಡುಪಿ, ಎ. 8: ಜಿಲ್ಲೆಯ ಕಾಪು ತಾಲೂಕಿನ ಎಲ್ಲೂರು ಗ್ರಾಮದಲ್ಲಿ ಕಾರ್ಯ ನಿರ್ವಸುತ್ತಿರುವ ಅದಾನಿ ಒಡೆತನದ ಯುಪಿಸಿಎಲ್ ಸಂಸ್ಥೆಯು ತನ್ನ ಸಿಎಸ್‌ಆರ್ ಯೋಜನೆಯನ್ನು ನಿರ್ವಹಿಸುವ ಅಂಗಸಂಸ್ಥೆಯಾದ ಅದಾನಿ ಪ್ರತಿಷ್ಠಾನ ವತಿಯಿಂದ ಸ್ಥಾವರದ ಸುತ್ತಮುತ್ತಲಿನ ಸ್ಥಳಗಳಲ್ಲಿ ನೆಲೆಸಿರುವ ಸುಮಾರು 200 ವಲಸಿಗರ ಕುಟುಂಬಗಳಿಗೆ ನಿತ್ಯಬಳಕೆಯ ಅಗತ್ಯ ವಸ್ತುಗಳನ್ನು ಒಳಗೊಂಡ ಆಹಾರ ಕಿಟ್‌ನ್ನು ವಿತರಿಸಿತು.

 ಅದಾನಿ ಪ್ರತಿಷ್ಠಾನ ಕೋವಿಡ್-19ನ್ನು ಎದುರಿಸಲು ಪ್ರಧಾನಮಂತ್ರಿ ಪರಿಹಾರ ನಿಧಿಗೆ ರೂ.100 ಕೋಟಿ ದೇಣಿಗೆ ನೀಡಿದ್ದು, ಕೋವಿಡ್-19 ಹರಡುವುದನ್ನು ತಡೆಯುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಇರುವ ಸಂದರ್ಭದಲ್ಲಿ ಯುಪಿಸಿಎಲ್ ಸ್ಥಾವರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇತರೆ ರಾಜ್ಯ ಹಾಗೂ ಜಿಲ್ಲೆಗಳಿಂದ ವಲಸೆ ಬಂದಿರುವ ಕಾರ್ಮಿಕ ಕುಟುಂಬಗಳಿಗೆ ಈ ಕಿಟ್‌ಗಳನ್ನು ವಿತರಿಸಲಾಯಿತು.

ಲಾಕ್‌ಡೌನ್ ಕಾರಣ ಯಾವುದೇ ಕೆಲಸವಿಲ್ಲದೆ ಮತ್ತು ಅವರವರ ಪ್ರದೇಶಕ್ಕೆ ಹಿಂದಿರುಗಲು ಸಾಧ್ಯವಾಗದೆ ಇರುವುದರಿಂದ ಅವರಿಗೆ ದಿನನಿತ್ಯಕ್ಕೆ ಬೇಕಾಗುವ ಆಹಾರ ಸಾಮಾಗ್ರಿಗಳ ಕಿಟ್‌ಗಳನ್ನು ಅದಾನಿ ಪ್ರತಿಷ್ಠಾನ ಮಂಗಳವಾರ ವಿತರಿಸಿತು.

ಅಕ್ಕಿ, ಬೇಳೆ, ಗೋಧಿ ಹಿಟ್ಟು, ಎಣ್ಣೆ ಮತ್ತು ಉಪ್ಪು ಇರುವ ಕಿಟ್‌ಗಳನ್ನು ಅದಾನಿ ಸಂಸ್ಥೆಯ ಅಧ್ಯಕ್ಷ ಕಿಶೋರ್ ಆಳ್ವ ಅವರು ಕಾಪು ತಾಲೂಕಿನ ತಹಶೀಲ್ದಾರ್ ಮೊಹಮ್ಮದ್ ಇಸಾಕ್‌ರ ಉಪಸ್ಥಿತಿಯಲ್ಲಿ ಕಾಪು ಪುರಸಭೆಯಿಂದ ಗುರುತಿಸಲ್ಪಟ್ಟ ನಂದಿಕೂರು, ಎಲ್ಲೂರು, ಸಾಂತೂರು, ಬೆಳಪು ಹಾಗೂ ಕಾಪು ವಲಯದ ಇತರೆ ಪ್ರದೇಶಗಳಲ್ಲಿ ನೆಲೆಸಿರುವ ಸುಮಾರು 200 ವಲಸೆ ಕುಟುಂಬದವರಿಗೆ ಆಹಾರ ಸಾಮಾಗ್ರಿಗಳ ಕಿಟ್ ನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಅದಾನಿ ಯುಪಿಸಿಎಲ್ ಸಂಸ್ಥೆಯ ಎಜಿಎಂ ಗಿರೀಶ್ ನಾವಡ ಹಾಗೂ ಹಿರಿಯ ವ್ಯವಸಾ್ಥಪಕ ಆರ್.ಜೇರೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News