ಬಿಜೆಪಿಯಿಂದ ಲಾಕ್‌ಡೌನ್ ಉಲ್ಲಂಘನೆ: ಸಿಪಿಎಂ ಖಂಡನೆ
Update: 2020-04-08 22:18 IST
ಮಂಗಳೂರು, ಎ.8: ಕೊರೋನ ವೈರಸ್‌ನ್ನು ತಡೆಗಟ್ಟಲು ಲಾಕ್‌ಡೌನ್ ಹೇರಿದರೂ ಕೂಡ ಬಿಜೆಪಿಯ ಸ್ಥಾಪನಾ ದಿನಾಚರಣೆಯ ಸಂದರ್ಭ ದ.ಕ.ಜಿಲ್ಲಾ ಬಿಜೆಪಿ ನಾಯಕರು ಲಾಕ್‌ಡೌನ್ ಉಲ್ಲಂಘಿಸಿದ್ದಾರೆ. ಜಿಲ್ಲಾಡಳಿತವೂ ಬಿಜೆಪಿಗೆ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟಿರು ವುದು ಸರಿಯಲ್ಲ ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಇಂತಹ ಸಭೆಗಳಿಂದ ಕೊರೋನ ವೈರಸ್ ಹರಡುವ ಸಾಧ್ಯತೆ ಇದೆ. ಜಿಲ್ಲಾಡಳಿತವು ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಮತ್ತು ಶಾಸಕರು ಹಸ್ತಕ್ಷೇಪ ಮಾಡಬಾರದು ಎಂದು ಬಿಜೆಪಿ ಒತ್ತಾಯಿಸಿದೆ.
ಲಾಕ್‌ಡೌನ್‌ನಿಂದಾಗಿ ಬೀಡಿ ಕಾರ್ಮಿಕರು, ಕಟ್ಟಡ, ಬಿಸಿಯೂಟ, ಅಂಗನವಾಡಿ ಮತ್ತು ಆಶಾ ಕಾರ್ಮಿಕರಿಗೆ ಕನಿಷ್ಟ 6,000 ರೂ. ಪರಿಹಾರ ಧನ ಮತ್ತು ಆಹಾರ ಧಾನ್ಯಗಳನ್ನು ಒದಗಿಸಬೇಕು ಎಂದು ಸಿಪಿಎಂ ದ.ಕ.ಜಿಲ್ಲಾ ಸಮಿತಿ ಮನವಿ ಮಾಡಿದೆ.