×
Ad

ಕೋವಿಡ್-19 ಎದುರಿಸಲು ಬಡ ದೇಶಗಳಿಗೆ 1.25 ಲಕ್ಷ ಕೋಟಿ ರೂ. ನೆರವು: ಐರೋಪ್ಯ ಒಕ್ಕೂಟ ಘೋಷಣೆ

Update: 2020-04-08 23:20 IST

ಬ್ರಸೆಲ್ಸ್ (ಬೆಲ್ಜಿಯಮ್), ಎ. 8: ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡಲು ಬಡ ದೇಶಗಳಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಐರೋಪ್ಯ ಒಕ್ಕೂಟವು 15 ಬಿಲಿಯ ಯುರೋ (ಸುಮಾರು 1.25 ಲಕ್ಷ ಕೋಟಿ ರೂಪಾಯಿ) ನೆರವು ಒದಗಿಸಲಿದೆ ಎಂದು ಐರೋಪ್ಯ ಕಮಿಶನ್ ಮುಖ್ಯಸ್ಥ ಉರ್ಸುಲಾ ವೊನ್ ಡೆರ್ ಲೆಯನ್ ಮಂಗಳವಾರ ಘೋಷಿಸಿದ್ದಾರೆ.

ದುರ್ಬಲ ಆರೋಗ್ಯ ರಕ್ಷಣೆ ವ್ಯವಸ್ಥೆಗಳನ್ನು ಹೊಂದಿರುವ ದೇಶಗಳು ಕೋವಿಡ್-19 ಪರಿಣಾಮಗಳನ್ನು ಎದುರಿಸಲು ಈ ಹಣವು ಸಹಾಯ ಮಾಡುತ್ತದೆ ಹಾಗೂ ಆ ದೇಶಗಳ ದೀರ್ಘಕಾಲೀನ ಆರ್ಥಿಕ ಚೇತರಿಕೆಗೆ ನೆರವು ನೀಡುತ್ತದೆ ಎಂದು ಅವರು ಹೇಳಿದರು.

‘‘ಸಂಘಟಿತ ಜಾಗತಿಕ ಪ್ರಯತ್ನಗಳ ಮೂಲಕ ಮಾತ್ರ ನಮಗೆ ಈ ಯುದ್ಧವನ್ನು ಗೆಲ್ಲಲು ಸಾಧ್ಯವಾಗಬಹುದು’’ ಎಂದು ಟ್ವಿಟರ್‌ನಲ್ಲಿ ಹಾಕಿದ ವೀಡಿಯೊವೊಂದರಲ್ಲಿ ವೊನ್ ಡೆರ್ ಲೆಯನ್ ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News