ವಿಶ್ವ ಅಥ್ಲೆಟಿಕ್ಸ್ ಟೂರ್ನಿ 2022ಕ್ಕೆ ಮರು ನಿಗದಿ

Update: 2020-04-09 05:22 GMT

ಲಂಡನ್, ಎ.8: ಒರೆಗಾನ್‌ನಲ್ಲಿ 2021ರ ಆಗಸ್ಟ್ ತಿಂಗಳಲ್ಲಿ ನಿಗದಿಯಾಗಿ ರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ್ನು 2022ರ ಜುಲೈಗೆ ಮರು ನಿಗದಿಪಡಿಸಲಾಗಿದೆ. ಒಲಿಂಪಿಕ್ ಗೇಮ್ಸ್ ಮುಂದಿನ ವರ್ಷ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ವಿಶ್ವ ಕ್ರೀಡಾ ಆಡಳಿತ ಮಂಡಳಿ ಬುಧವಾರ ತಿಳಿಸಿದೆ.

  ಕೊರೋನ ವೈರಸ್ ಅಟ್ಟಹಾಸದಿಂದಾಗಿ ಈ ವರ್ಷದ ಜುಲೈ-ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಟೋಕಿಯೊ ಗೇಮ್ಸ್ ನ್ನು 2021ರ ಜುಲೈ-ಆಗಸ್ಟ್‌ಗೆ ಮುಂದೂಡಲಾಗಿತ್ತು. ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ವಿಶ್ವ ಚಾಂಪಿಯನ್‌ಶಿಪ್ 2021ರ ಆಗಸ್ಟ್ 6ರಿಂದ 15ರ ತನಕ ನಡೆಯಬೇಕಾಗಿತ್ತು. ಆದರೆ, ಒಂದು ವರ್ಷ ಮುಂದೂಡಲ್ಪಟ್ಟ ಟೋಕಿಯೊ ಒಲಿಂಪಿಕ್ಸ್ ಹಾಗೂ ಪ್ಯಾರಾಲಿಂಪಿಕ್ಸ್‌ನಿಂದಾಗಿ 2022ರ ಜುಲೈಗೆ ಮುಂದೂಡಲ್ಪಟ್ಟಿದೆ.

ಈ ವಾರ ಕ್ರೀಡಾ ಪಾಲುದಾರರೊಂದಿಗೆ ತೀವ್ರ ಚರ್ಚೆ ನಡೆಸಿದ ಬಳಿಕವಷ್ಟೇ ಹೊಸ ದಿನಾಂಕವನ್ನು ನಿಗದಿಪಡಿಸಲಾಗುವುದು ಎಂದು ವಿಶ್ವ ಅಥ್ಲೆಟಿಕ್ಸ್ ಪ್ರಕಟನೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News