ದಿಲ್ಲಿಯಲ್ಲಿ ಇಬ್ಬರು ಮಹಿಳಾ ವೈದ್ಯರ ಮೇಲೆ ಹಲ್ಲೆ

Update: 2020-04-09 05:36 GMT

ಹೊಸದಿಲ್ಲಿ, ಎ.9: ಅಗತ್ಯದ ವಸ್ತುಗಳನ್ನು ಖರೀದಿಸುತ್ತಿದ್ದ  ಇಬ್ಬರು ಮಹಿಳಾ ವೈದ್ಯರ ಮೇಲೆ ವ್ಯಕ್ತಿಯೊಬ್ಬನು ಹಲ್ಲೆ ನಡೆಸಿದ ಘಟನೆ ಬುಧವಾರ ರಾತ್ರಿ ನಡೆದಿದೆ.

ಸಫ್ದರ್ಜಂಗ್ ಆಸ್ಪತ್ರೆ ಯಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಬ್ಬರು ಮಹಿಳಾ ವೈದ್ಯರು ಸ್ಥಳೀಯ ಅಂಗಡಿಯೊಂದರಲ್ಲಿ ತರಕಾರಿ ಮತ್ತು ದೀನಸಿ ಸಾಮಗ್ರಿಗಳನ್ನು ಖರೀದಿಸುತ್ತಿದ್ದಾಗ  ಅಲ್ಲಿಗೆ ಆಗಮಿಸಿದ ಗೌತಮ್ ನಗರದ ನಿವಾಸಿಯೊಬ್ಬನು ನಿಮ್ಮಿಂದ ಕೊರೋನ ವೈರಸ್ ಸೋಂಕು ಹರಡುತ್ತಿದೆ ಎಂದು ಆರೋಪಿಸಿ ದೂರ ನಿಲ್ಲುವಂತೆ ಸೂಚಿಸಿದ ಎನ್ನಲಾಗಿದೆ.

ವೈದ್ಯರು  ಆತನಿಗೆ ತಮ್ಮ ಪರಿಚಯ ತಿಳಿಸಿದಾಗ ಸಿಟ್ಟಿನಿಂದ ಆತ ವೈದ್ಯರ ಮೇಲೆ ಹಲ್ಲೆ ನಡೆಸಿದ ಎನ್ನಲಾಗಿದೆ. ವೈದ್ಯರ ಕೈಯನ್ನು ಎಳೆದಾಡುತ್ತಿದ್ದಾಗ  ಸ್ಥಳೀಯ ನಿವಾಸಿಯೊಬ್ಬರು ಮಧ್ಯಪ್ರವೇಶಿಸಿ ವೈದ್ಯರನ್ನು ಪಾರು ಮಾಡಿದರು ಎಂದು ತಿಳಿದು ಬಂದಿದೆ.

ವೈದ್ಯರಿಗೆ ಥಳಿಸಿದ ಆರೋಪಿ ಪರಾರಿಯಾಗಿದ್ದಾನೆ.  ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News