ಭಾರತದ ಪರ 420ಕ್ಕೂ ಅಧಿಕ ಪಂದ್ಯ ಆಡಿದ ಆಟಗಾರರು

Update: 2020-04-09 06:10 GMT

 ಹೊಸದಿಲ್ಲಿ, ಎ.8: ಭಾರತದ ಕ್ರಿಕೆಟ್ ರಂಗದಲ್ಲಿ ಗರಿಷ್ಠ ಪಂದ್ಯಗಳನ್ನಾಡಿದವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್. ಟೆಸ್ಟ್ , ಏಕದಿನ ಮತ್ತು ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಮಾದರಿಯ ಕ್ರಿಕೆಟ್‌ನಲ್ಲಿ ಐದು ಮಂದಿ ಆಟಗಾರರು 420ಕ್ಕೂ ಅಧಿಕ ಪಂದ್ಯಗಳನ್ನು ಆಡಿದ್ದಾರೆ.

<  ಸಚಿನ್ ತೆಂಡುಲ್ಕರ್, ಮಾಜಿ ನಾಯಕರುಗಳಾದ ಮಹೇಂದ್ರ ಸಿಂಗ್ ಧೋನಿ, ಸೌರವ್ ಗಂಗುಲಿ, ರಾಹುಲ್ ದ್ರಾವಿಡ್ ಮತ್ತು ಮುಹಮ್ಮದ್ ಅಝರುದ್ದೀನ್ ಗರಿಷ್ಠ ಪಂದ್ಯಗಳನ್ನು ಆಡಿರುವ ಭಾರತದ ಆಟಗಾರರು.

 ಸಚಿನ್ ತೆಂಡುಲ್ಕರ್: ಸಚಿನ್ ತೆಂಡುಲ್ಕರ್ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠರನ್ ದಾಖಲಿಸಿದ್ದಾರೆ. 16ರ ಹರೆಯದಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆಡುವ ಮೂಲಕ ಕ್ರಿಕೆಟ್ ಪ್ರವೇಶಿಸಿದ್ದ ಸಚಿನ್ 100 ಅಂತರ್‌ರಾಷ್ಟ್ರೀಯ ಶತಕಗಳನ್ನು ದಾಖಲಿಸಿದ್ದ ವಿಶ್ವದ ಏಕೈಕ ಆಟಗಾರ. ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ದಾಖಲಿಸಿದ್ದ ಮೊದಲ ಆಟಗಾರ.

 ಒಟ್ಟು ಪಂದ್ಯಗಳು: 664, ರನ್: 34, 357, ಸರಾಸರಿ 48.52

ಟೆಸ್ಟ್ : 200, ರನ್ 15,921, ಗರಿಷ್ಠ ಔಟಾಗದೆ 248, ಸರಾಸರಿ 53.8.

  ಏಕದಿನ : 463, ರನ್ 18, 426, ಗರಿಷ್ಠ ಔಟಾಗದೆ 210, ಸರಾಸರಿ 44.8,

 ಟ್ವೆಂಟಿ-20: 1, ರನ್ 10, ಗರಿಷ್ಠ 10, ಸರಾಸರಿ 10.

<       ಮಹೇಂದ್ರ ಸಿಂಗ್ ಧೋನಿ: ವಿಕೆಟ್ ಕೀಪರ್ -ಬ್ಯಾಟ್ಸ್‌ಮನ್ ಮಹೇಂದ್ರ ಸಿಂಗ್ ಧೋನಿ ಐಸಿಸಿಯ ಎಲ್ಲ ವಿಧದ ಟ್ರೋಫಿಯನ್ನು ಎತ್ತಿದವರು. ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಆಗಿರುವ ಧೋನಿಗೆ 38 ವರ್ಷವಾಗಿದ್ದರೂ, ಇನ್ನೂ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿಲ್ಲ. 2004ರ ಡಿಸೆಂಬರ್‌ನಲ್ಲಿ ಬಾಂಗ್ಲಾ ವಿರುದ್ಧ ಆಡುವ ಮೂಲಕ ಧೋನಿ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದ್ದರು. ಐಸಿಸಿ ಏಕದಿನ ವಿಶ್ವಕಪ್ ಮತ್ತು ಟ್ವೆಂಟಿ -20 ವಿಶ್ವಕಪ್ ಟ್ರೋಫಿ ಹಾಗೂ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿ ಹಿಡಿದಿದ್ದ ಧೋನಿ ಎರಡು ಬಾರಿ ಐಸಿಸಿ ವರ್ಷದ ಆಟಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿ, ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ. 2007ರಲ್ಲಿ ರಾಹುಲ್ ದ್ರಾವಿಡ್‌ರಿಂದ ತಂಡದ ನಾಯಕತ್ವ ವಹಿಸಿಕೊಂಡ ಧೋನಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ದ್ವಿಪಕ್ಷೀಯ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಶ್ರೀಲಂಕಾ ಮತ್ತು ನ್ಯೂಝಿಲ್ಯಾಂಡ್‌ನಲ್ಲಿ ಏಕದಿನ ಸರಣಿ ಜಯಿಸಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 2009ರಲ್ಲಿ ಮೊದಲ ಬಾರಿ ಭಾರತವನ್ನು ನಂ.1 ಸ್ಥಾನಕ್ಕೆ ತಲುಪಿಸಿದ್ದರು. 2013ರಲ್ಲಿ ಧೋನಿ ನಾಯಕತ್ವದ ಭಾರತ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ 4-0 ಅಂತರದಲ್ಲಿ ಸರಣಿ ಜಯಿಸಿತ್ತು. ಈ ಮೂಲಕ ಭಾರತ 40 ವರ್ಷಗಳಲ್ಲಿ ಆಸ್ಟ್ರೇಲಿಯಕ್ಕೆ ಅದರ ತವರಿನಲ್ಲಿ ವೈಟ್‌ವಾಶ್ ಮಾಡಿದ ವಿಶ್ವದ ಮೊದಲ ತಂಡ ಎನಿಸಿಕೊಂಡಿತ್ತು.

ಪಂದ್ಯಗಳು: 538, ರನ್ 17, 266, ಸರಾಸರಿ 44.96,

 ಟೆಸ್ಟ್ :90, ರನ್ 4,876, ಗರಿಷ್ಠ 224, ಸರಾಸರಿ 38.1

ಏಕದಿನ :350, ರನ್ 10,733, ಔಟಾಗದೆ 183 ಮತ್ತು ಸರಾಸರಿ 50.6, ಟ್ವೆೆಂಟಿ-20: 98, ರನ್ 1,617, ಗರಿಷ್ಠ 56, ಸರಾಸರಿ 37.6.

 ರಾಹುಲ್ ದ್ರಾವಿಡ್: ಮಹಾನ್ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರು ಇದೀಗ ಬೆಂಗಳೂರಿನಲ್ಲಿ ನ್ಯಾಶನಲ್ ಕ್ರಿಕೆಟ್ ಅಕಾಡಮಿ(ಎನ್‌ಸಿಎ) ಕಾರ್ಯಾಚರಣೆಯ ನಿರ್ದೇಶಕರಾಗಿದ್ದಾರೆ. ದ್ರಾವಿಡ್ ಕ್ರಿಕೆಟ್ ಆಡಿರುವ ಎಲ್ಲ 10 ದೇಶಗಳ ಮುಂದೆ ಶತಕ ಬಾರಿಸಿದ್ದ ಮೊದಲ ಆಟಗಾರ. ಅಷ್ಟೇ ಅಲ್ಲ ಅವರು ಆಡಿದ್ದ 286 ರೆಡ್ ಬಾಲ್(ಟೆಸ್ಟ್) ಇನಿಂಗ್ಸ್ ಗಳಲ್ಲಿ ಒಮ್ಮೆಯೂ ಶೂನ್ಯಕ್ಕೆ ಔಟಾಗಿಲ್ಲ. ರಾಹುಲ್ ದ್ರಾವಿಡ್ 31,258 ಎಸೆತಗಳನ್ನು ಎದುರಿಸಿದ್ದಾರೆ. 44,152 ನಿಮಿಷಗಳ ಕಾಲ ಕ್ರೀಸ್‌ನಲ್ಲಿ ತಳವೂರಿದ್ದರು. ಗರಿಷ್ಠ ಎಸೆತಗಳನ್ನು ಎದುರಿಸಿದ ಮತ್ತು ಅತ್ಯಂತ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ತಳವೂರಿದ ದಾಖಲೆ ಹೊಂದಿದ್ದಾರೆ. 164 ಟೆಸ್ಟ್ ಗಳಲ್ಲಿ 210 ಕ್ಯಾಚ್ ಪಡೆದಿದ್ದಾರೆ. ಒಟ್ಟು ಪಂದ್ಯಗಳು:509, ರನ್ 24,208, ಸರಾಸರಿ 45.41

ಟೆಸ್ಟ್: 164, ರನ್ 13,288, ಗರಿಷ್ಠ 270 ಸರಾಸರಿ 52.3

ಏಕದಿನ : 344, ರನ್ 10,889, ಗರಿಷ್ಠ 153, ಸರಸರಿ 39.2

ಟ್ವೆಂಟಿ-20: 1, ರನ್ 31, ಸರಾಸರಿ 31.0

► ಮುಹಮ್ಮದ್ ಅಝರುದ್ದೀನ್: ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ 47 ಟೆಸ್ಟ್ ಮತ್ತು 174 ಏಕದಿನ ಪಂದ್ಯಗಳಲ್ಲಿ ಭಾರತದ ನಾಯಕರಾಗಿದ್ದರು. 1984ರಲ್ಲಿ ಇಂಗ್ಲೆಂಡ್ ವಿರುದ್ಧ ತನ್ನ ಚೊಚ್ಚಲ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಅಝರುದ್ದೀನ್ ಶತಕ(100) ದಾಖಲಿಸಿದ್ದರು. ಆ ಬಳಿಕ ಎರಡು ಟೆಸ್ಟ್‌ಗಳಲ್ಲೂ ಶತಕ ಬಾರಿಸಿದ್ದರು. ಹ್ಯಾಟ್ರಿಕ್ ಶತಕದ ಅವರ ದಾಖಲೆಯನ್ನು ಯಾರಿಗೂ ಈ ವರೆಗೆ ಅಂದರೆ 36 ವರ್ಷಗಳಲ್ಲಿ ಮುರಿಯಲು ಸಾಧ್ಯವಾಗಿಲ್ಲ. 1991ರಲ್ಲಿ ವಿಸ್ಡನ್ ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿಗೆ ಭಾಜನರಾಗಿದ್ದರು. ಕಳ್ಳಾಟದ ಸುಳಿಯಲ್ಲಿ ಸಿಲುಕಿ ಅವರ ಕ್ರಿಕೆಟ್ ಅಂತ್ಯಗೊಂಡಿತ್ತು. ಟೆಸ್ಟ್‌ನಲ್ಲಿ 1 ರನ್‌ನಿಂದ ದ್ವಿಶತಕ ವಂಚಿತಗೊಂಡಿದ್ದ ಅಝರ್ 99 ಟೆಸ್ಟ್‌ಗಳಲ್ಲಿ ಆಡಿದ್ದರು. ಅರ್ಜುನ ಮತ್ತು ಪದ್ಮಶ್ರೀ ಪ್ರಶಸ್ತಿ ಪಡೆದಿದ್ದರು.

ಒಟ್ಟು ಪಂದ್ಯಗಳು: 433, ರನ್ 15, 593 ಸರಾಸರಿ 39.77.

ಟೆಸ್ಟ್ :99, ರನ್ 6,215, ಗರಿಷ್ಠ 199, ಸರಾಸರಿ 45

ಏಕದಿನ: 334, ರನ್ 9,378, ಗರಿಷ್ಠ ಔಟಾಗದೆ 153, ಸರಸರಿ 36.9,

ಸೌರವ್ ಗಂಗುಲಿ : ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗುಲಿ ಅವರು ಕ್ರಿಕೆಟ್‌ನಲ್ಲಿ ಯಶಸ್ವಿ ನಾಯಕರಲ್ಲಿ ಒಬ್ಬರಾಗಿದ್ದಾರೆ. ಅಗ್ರ ಸರದಿಯ ಎಡಗೈ ಬ್ಯಾಟ್ಸ್‌ಮನ್ ಗಂಗುಲಿ ಅಗತ್ಯ ಬಿದ್ದಾಗ ಬೌಲಿಂಗ್ ನಡೆಸುತ್ತಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಸತತ 4 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದ ಗಂಗುಲಿ ಅವರು ವಿದೇಶದಲ್ಲಿ ಮಿಂಚಿದ್ದ ಭಾರತದ ನಾಯಕರಾಗಿದ್ದರು. ಅವರ ನಾಯಕತ್ವದಲ್ಲಿ ಆಡಿದ್ದ 28 ಟೆಸ್ಟ್ ಪಂದ್ಯಗಳಲ್ಲಿ 11ರಲ್ಲಿ ಭಾರತ ಜಯ ಗಳಿಸಿತ್ತು. ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಸತತ 3 ಶತಕ ದಾಖಲಿಸಿದ ಮೊದಲ ಆಟಗಾರನಾಗಿದ್ದಾನೆ. ಒಟ್ಟು ಪಂದ್ಯಗಳು 424, ರನ್ 18,575, ಸರಾಸರಿ 41.46

ಟೆಸ್ಟ್: 113, ರನ್ 7,212, ಗರಿಷ್ಠ 239, ಸರಾಸರಿ 42.2

ಏಕದಿನ :311, ರನ್ 11,363, ಗರಿಷ್ಠ 183, ಸರಾಸರಿ 41.0

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News