ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ ಬ್ರೆಝಿಲ್ ಅಧ್ಯಕ್ಷ ಬೋಲ್ಸನಾರೊ

Update: 2021-05-23 06:06 GMT

ಹೊಸದಿಲ್ಲಿ, ಎ.9:ಕೊರೋನ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್  ತಯಾರಿಗೆ ಸಂಬಂಧಿಸಿದ ಕಚ್ಚಾವಸ್ತುಗಳನ್ನು ಪೂರೈಸಿದ  ಭಾರತಕ್ಕೆ ಬ್ರೆಝಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಧನ್ಯವಾದ ಅರ್ಪಿಸಿದ್ದಾರೆ

ಬ್ರೆಝಿಲ್ ಅಧ್ಯಕ್ಷ ಬೋಲ್ಸನಾರೊ   ಅವರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ  ಅವರನ್ನು ಸಂಪರ್ಕಿಸಿ “ ಹೈಡ್ರಾಕ್ಸಿಕ್ಲೋರೋಕ್ವಿನ್ ಉತ್ಪಾದನೆಯನ್ನು ಮುಂದುವರಿಸಲು ನೀವು ಕಳುಹಿಸಿಕೊಟ್ಟಿರುವ  ಕಚ್ಚಾವಸ್ತುಗಳನ್ನು ನಾವು ಶನಿವಾರ ಸ್ವೀಕರಿಸುತ್ತೇವೆ. ಇದರಿಂದಾಗಿ ಬ್ರೆಝಿಲ್ಗೆ   ಕೋವಿಡ್ -19  ರೋಗಿಗಳಿಗೆ, ಮಲೇರಿಯ, ಚರ್ಮರೋಗ ಮತ್ತು ಸಂಧಿವಾತ ರೋಗಿಗಳಿಗೆ ಚಿಕಿತ್ಸೆ ನೀಡಲು ಸಾಧ್ಯ.  ಬ್ರೆಝಿಲ್ ಜನರಿಗೆ ಇಂತಹ ಸಮಯೋಚಿತ ಸಹಾಯಕ್ಕಾಗಿ ಭಾರತಕ್ಕೆ  ಮತ್ತು ಪ್ರಧಾನಿ ನರೇಂದ್ರ ಮೋದಿ  ಅವರಿಗೆ  ನಾನು ಧನ್ಯವಾದ ಅರ್ಪಿಸುತ್ತೇನೆ. ಎಂದು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News