ಕೋಮು ಪ್ರಚೋದಕ ಪೋಸ್ಟ್ : ಬಂಟ್ವಾಳದಲ್ಲಿ ಮತ್ತೋರ್ವನ ವಿರುದ್ಧ ಪ್ರಕರಣ ದಾಖಲು

Update: 2020-04-09 06:53 GMT

ಬಂಟ್ವಾಳ, ಎ. 9: ಕೊರೋನ ವೈರಸ್ ಹರಡುವಿಕೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಸ್ಟೇಟಸ್ ಹಾಕಿದ ಆರೋಪದಲ್ಲಿ ಯುವಕನೋರ್ವನ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ದಾಖಲಾಗಿದೆ.

ಸಜಿಪ ಮೂಡ ಗ್ರಾಮದ ಕಾರಾಜೆ ಎಸ್.ಡಿ.ಪಿ.ಐ. ಸದಸ್ಯ ಮುಹಮ್ಮದ್ ನಿಸಾರ್ ಎಂಬವರು ನೀಡಿದ ದೂರಿನಂತೆ ಬೋಳಿಯಾರ್ ಗ್ರಾಮದ ರಂತಡ್ಕ ವಡಕಿನಕಟ್ಟೆ ನಿವಾಸಿ ರಂಜನ್ ಪೂಜಾರಿ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ಮಂದಿರ, ಗುರುದ್ವಾರಗಳಿಂದ ದಾನ ಮಾಡುತ್ತಿದ್ದರೆ ಮಸೀದಿಗಳಿಂದ ಕೊರೋನ ಹಬ್ಬಿಸುವ ಕೆಲಸ ಆಗುತ್ತಿದೆ ಎಂದು ತನ್ನ ವಾಟ್ಸ್ಆ್ಯಪ್ ಸ್ಟೇಟಸ್ ನಲ್ಲಿ ಹಾಕುವ ಮೂಲಕ ಒಂದು ಸಮುದಾಯವನ್ನು ನಿಂದಿಸಿದ್ದು ಅಲ್ಲದೆ ಇದು ಕೋಮು ಗಲಭೆಗೆ ಪ್ರಚೋದನೆ ನೀಡುವ ಮೂಲಕ ಸಮಾಜದಲ್ಲಿ ಅಶಾಂತಿಯ ಸೃಷ್ಟಿಸುವ ಪ್ರಯತ್ನವಾಗಿದೆ. ಆದ್ದರಿಂದ ರಂಜನ್ ಪೂಜಾರಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಪ್ರಕರಣವನ್ನು ದಾಖಲಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News