ಒಡಿಶಾದಲ್ಲಿ ಲಾಕ್ ಡೌನ್ ಎ.30ರ ತನಕ ವಿಸ್ತರಣೆ

Update: 2020-04-09 08:09 GMT

ಭುವನೇಶ್ವರ, ಎ.9:  ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಒಡಿಶಾ ಸರಕಾರ ಇದೀಗ ಜಾರಿಯಲ್ಲಿರುವ ಲಾಕ್ ಡೌನ್ ನ್ನು  ಎಪ್ರಿಲ್ 30ರ ತನಕ ವಿಸ್ತರಿಸುವ ನಿರ್ಧಾರ ಕೈಗೊಂಡಿದೆ.

ಲಾಕ್ ಡೌನ್ ನ್ನು  ವಿಸ್ತರಿಸುವ ನಿರ್ಧಾರ ಕೈಗೊಂಡಿರುವ ದೇಶದ ಮೊದಲ ರಾಜ್ಯವಾಗಿದೆ ಒಡಿಶಾ. ಕೇಂದ್ರ ಸರಕಾರದ ಆದೇಶದಂತೆ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಎ.14ಕ್ಕೆ ಕೊನೆಗೊಳ್ಳಬೇಕಿತ್ತು.

ಭಾರತದಲ್ಲಿ ಸಾವಿಗೀಡಾದವರ  ಸಂಖ್ಯೆ 166 ಕ್ಕೆ ಏರಿದೆ  ಕೊರೋನ ವೈರಸ್ ಸೋಂಕಿತ ಜನರ ಸಂಖ್ಯೆ ಗುರುವಾರ 5,734 ಕ್ಕೆ ಏರಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸಿವೆ.

ಕೊರೋನ ವೈರಸ್ ಹರಡುವುದನ್ನು  ತಪ್ಪಿಸಲು  ಲಾಕ್‌ಡೌನ್ ವಿಸ್ತರಿಸಲಾಗುವುದು ಮತ್ತು ಎಪ್ರಿಲ್ 14 ರ ನಂತರ ಒಂದೇ ಬಾರಿಗೆ ನಿರ್ಬಂಧಗಳನ್ನು ತೆಗೆದುಹಾಕಲಾಗುವುದಿಲ್ಲ ಎಂದು ಪಿಎಂ ಮೋದಿ ಅವರು ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ವೀಡಿಯೊ ಸಭೆಯಲ್ಲಿ  ಅಭಿಪ್ರಾಯಪಟ್ಟಿದ್ದರು.

ದಿಲ್ಲಿಯಲ್ಲಿ, ಪ್ರಸಿದ್ಧ ಸದರ್ ಬಜಾರ್ ಸೇರಿದಂತೆ 20 ಕೊರೋನ ವೈರಸ್ ಹಾಟ್‌ಸ್ಪಾಟ್‌ಗಳನ್ನು ಮೊಹರು ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮುಖ್ಯಮಂತ್ರಿಯವರ ನಿವಾಸದಲ್ಲಿ ನಡೆದ ತುರ್ತು ಸಭೆಯಲ್ಲಿ ಪ್ರಕಟಿಸಿದರು.

ಅಮೆರಿಕ   ನೇತೃತ್ವದ 30 ಕ್ಕೂ ಹೆಚ್ಚು ದೇಶಗಳಿಂದ ಹೆಚ್ಚುತ್ತಿರುವ ಒತ್ತಡ ಮತ್ತು ಪ್ರಮುಖ ಔಷಧದ  ಕೋರಿಕೆಗಳ ಮಧ್ಯೆ, ಸಾಂಕ್ರಾಮಿಕ ರೋಗದಿಂದ ಹೆಚ್ಚು ತೊಂದರೆಗೊಳಗಾದ  ರಾಷ್ಟ್ರಗಳಿಗೆ ಪ್ರಮುಖ ಔಷಧದ ಸೀಮಿತ ರಫ್ತುಗಳನ್ನು ಸರ್ಕಾರವು ಅನುಮತಿಸಿದೆ. ಕೊರೋನ ವೈರಸ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ನಂಬಲಾದ ಮಲೇರಿಯಾವನ್ನು ಗುಣಪಡಿಸುವ ಔಷಧವಾಗಿರುವ  29 ಮಿಲಿಯನ್ ಡೋಸ್ ಹೈಡ್ರಾಕ್ಸಿಕ್ಲೋರೋಕ್ವಿನ್ ನ್ನು ಖರೀದಿಸಲು ಸರಕಾರ  ಅಮೆರಿಕಕ್ಕೆ  ಅನುಮತಿ ನೀಡಿದ ನಂತರ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಧನ್ಯವಾದ ಅರ್ಪಿಸಿದರು.

 ಕೊರೋನ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್  ತಯಾರಿಗೆ ಸಂಬಂಧಿಸಿದ ಕಚ್ಚಾವಸ್ತುಗಳನ್ನು ಪೂರೈಸಿದ  ಭಾರತಕ್ಕೆ ಬ್ರೆಝಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಧನ್ಯವಾದ ಅರ್ಪಿಸಿದ್ದಾರೆ

ಏತನ್ಮಧ್ಯೆ, ಸರ್ಕಾರಿ ಮತ್ತು ಖಾಸಗಿ ರೋಗನಿರ್ಣಯ ಪ್ರಯೋಗಾಲಯಗಳಲ್ಲಿ ಕೊರೋನ ವೈರಸ್ ಪರೀಕ್ಷೆಗಳನ್ನು ಉಚಿತವಾಗಿ ನಡೆಸುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News