ಕೊರೋನದಿಂದ ದೇಶದ ಅರ್ಥವ್ಯವಸ್ಥೆ ಸುಧಾರಣೆ ಸಾಧ್ಯತೆ 'ತೀವ್ರವಾಗಿ ಬದಲಾಗಿದೆ' : ರಿಸರ್ವ್ ಬ್ಯಾಂಕ್

Update: 2020-04-09 10:39 GMT

ಮುಂಬೈ: ಕೊರೋನ ವೈರಸ್ ಹಾವಳಿಯಿಂದಾಗಿ ದೇಶದ ಅರ್ಥವ್ಯವಸ್ಥೆಯ ಸುಧಾರಣೆಯ ಸಾಧ್ಯತೆ ತೀವ್ರವಾಗಿ ಬದಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಆರ್ಥಿಕ ನೀತಿ ವರದಿಯಲ್ಲಿ ಹೇಳಿದೆ.

ಕೋವಿಡ್-19 ಹಾವಳಿ ಆರಂಭಗೊಳ್ಳುವ ಮುನ್ನ ಆರ್ಥಿಕ ವರ್ಷ 2020-21ರಲ್ಲಿ ಭಾರತದ ಪ್ರಗತಿ ಪ್ರಮಾಣದ ವಿಚಾರದಲ್ಲಿ ಭರವಸೆಯಿತ್ತು ಎಂದು ಬ್ಯಾಂಕ್ ಹೇಳಿದೆ.

``ಕೊರೋನ ಹಾವಳಿ ಅಂತ್ಯಗೊಂಡ ನಂತರ  ಜಾಗತಿಕ ಅರ್ಥವ್ಯವಸ್ಥೆ ಈ ವರ್ಷ ಆರ್ಥಿಕ ಹಿಂಜರಿತಕ್ಕೆ ಕುಸಿಯಬಹುದು'' ಎಂದೂ ಆರ್‍ಬಿಐ ತನ್ನ ವರದಿಯಲ್ಲಿ ಹೇಳಿದೆ.

ಸದ್ಯದ ಪರಿಸ್ಥಿತಿ ಭಾರೀ ಅನಿಶ್ಚಿತತೆಯಿಂದ ಕೂಡಿರುವಾಗ ಜಿಡಿಪಿ ಕುರಿತಂತೆ ಯಾವುದೇ ಅಂದಾಜು ಮಾಡುವುದರಿಂದ ಹಿಂದೆ ಜಾರುವುದಾಗಿಯೂ ಬ್ಯಾಂಕ್ ಹೇಳಿದೆಯಲ್ಲದೆ, ಕೋವಿಡ್-19 ತೀವ್ರತೆ, ಅದು ಹರಡಬಹುದಾದ ವೇಗ ಹಾಗೂ ಅದು ಎಷ್ಟು ಸಮಯ ಸಮಸ್ಯೆ ಸೃಷ್ಟಿಸಬಹುದು ಎಂಬುದರ ಕುರಿತು  ತಾನು ಪರಾಮರ್ಶಿಸುವುದಾಗಿಯೂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News