​ಕಾಸರಗೋಡು : ಮತ್ತೆ ನಾಲ್ವರಲ್ಲಿ ಕೊರೋನ ಸೋಂಕು ದೃಢ

Update: 2020-04-09 13:42 GMT
ಸಾಂದರ್ಭಿಕ ಚಿತ್ರ

ಕಾಸರಗೋಡು : ಸೋಂಕಿತರ ಸಂಪರ್ಕದಿಂದ ಮೂರು ಮಂದಿಗೆ ಸೋಂಕು ತಗಲಿದ್ದು, ಇದರಿಂದ ಕಾಸರಗೋಡಿನಲ್ಲಿ ಗುರುವಾರ ನಾಲ್ವರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇದರಿಂದ ಕಾಸರಗೋಡಿನಲ್ಲಿ  ಸೋಂಕಿತರ ಸಂಖ್ಯೆ 160ಕ್ಕೆ ತಲುಪಿದೆ.

ವಿದೇಶದಿಂದ ಬಂದಿದ್ದ ಕಳ್ನಾಡ್  ನಿವಾಸಿಯ ಮೂವರು ಮಕ್ಕಳಲ್ಲಿ ಸೋಂಕು ಪತ್ತೆಯಾಗಿದೆ.

19 ವರ್ಷದ ಯುವಕ , 14 ಮತ್ತು 8 ವರ್ಷದ ಬಾಲಕಿಯರಲ್ಲಿ ಸೋಂಕು ದೃಢಪಟ್ಟಿದೆ.  ಕಳ್ನಾಡ್ ನಿವಾಸಿಯಲ್ಲಿ ಈ ಹಿಂದೆ ಸೋಂಕು ಪತ್ತೆಯಾಗಿತ್ತು.

ಇದಲ್ಲದೆ ದುಬೈ ಯಿಂದ ಬಂದಿದ್ದ  ಬೆಂಡಿಚ್ಚಾಲ್  ನಿವಾಸಿಯೋರ್ವನಲ್ಲಿ  ಸೋಂಕು ಪತ್ತೆಯಾಗಿದೆ. ಕೇರಳದಲ್ಲಿ ಗುರುವಾರ 12 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 11 ಮಂದಿಗೆ  ಸಂಪರ್ಕದಿಂದ ಸೋಂಕು ಹರಡಿದೆ. ಕಣ್ಣೂ ರು ನಾಲ್ಕು, ಮಲಪ್ಪುರಂ ಎರಡು, ತಿರುವನಂತಪುರಂ, ಕೊಲ್ಲಂ  ತಲಾ ಒಬ್ಬನಲ್ಲಿ ಸೋಂಕು ದೃಢಪಟ್ಟಿದೆ.

ಕೇರಳದವರಿಗೆ ಚಿಕಿತ್ಸೆಗೆ ತಲಪಾಡಿ ಗಡಿ ಮೂಲಕ ಮಂಗಳೂರಿಗೆ ತೆರಳಲಾರದ ಕಠಿಣ ಸಂದರ್ಭ ಉಂಟಾಗಿದ್ದು ಇದರಿಂದ ರೋಗಿಗಳಿಗೆ ಸೂಕ್ತ  ಚಿಕಿತ್ಸೆ ತಲಪಿಸಲು ಅತ್ಯುತ್ತಮ ಆಸ್ಪತ್ರೆಯ ಸೇವೆ ಬಳಸಲಾಗುವುದು.  ಗುರುವಾರ ಕೂಡಾ ಓರ್ವ  ಚಿಕಿತ್ಸೆ ಲಭಿಸದೆ ಮೃತಪಟ್ಟಿದ್ದು , ಈ ಹಿನ್ನಲೆಯಲ್ಲಿ ಕೇರಳದಲ್ಲೇ ಅಗತ್ಯ ಚಿಕಿತ್ಸಾ ಸೌಲಭ್ಯ  ಕಲ್ಪಿಸಲಾಗುವುದು . ಅಗತ್ಯ ಬಿದ್ದಲ್ಲಿ ಏರ್ ಅಂಬ್ಯುಲೆನ್ಸ್ ಅಥವಾ ಹೆಲಿಕಾಪ್ಟರ್ ಸೇವೆ ಬಳಸಲಾಗುವುದು ಎಂದು ಕೇರಳ ಮುಖ್ಯಮಂತ್ರಿ  ಪಿಣರಾಯಿ ವಿಜಯನ್  ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News