×
Ad

ಲಾಕ್‌ಡೌನ್ ಮಧ್ಯೆ ಕುಂದಾಪುರದಲ್ಲಿ ಸರಳ ವಿವಾಹ

Update: 2020-04-09 20:53 IST

ಕುಂದಾಪುರ, ಎ.9: ಕೊರೋನಾ ಲಾಕ್‌ಡೌನ್ ಮಧ್ಯೆ ಕುಂದಾಪುರದಲ್ಲಿ ಗುರುವಾರ ಸರಳ ವಿವಾಹವೊಂದು ನೆರವೇರಿರುವ ಬಗ್ಗೆ ವರದಿಯಾಗಿದೆ.

ಯಾವುದೇ ಶುಭ ಸಮಾರಂಭಗಳಲ್ಲಿ ಹೆಚ್ಚು ಮಂದಿ ಸೇರಬಾರದೆಂಬ ಆದೇಶದ ಹಿನ್ನೆಲೆಯಲ್ಲಿ ಅಂಪಾರು ಗುಡಿಬೆಟ್ಟು ನಿವಾಸಿ ಗಿರೀಶ್ ಹಾಗೂ ಅಚ್ಲಾಡಿ ಮೂಲದ ಪ್ರೀತಿಕಾ ಎಂಬವರ ವಿವಾಹವು ಸರಳವಾಗಿ ಕುಂದಾಪುರದ ಹಳ್ನಾಡು ಗಣಪತಿ ದೇವಸ್ಥಾನದಲ್ಲಿ ಜರಗಿತು.

ಈ ವಿವಾಹದಲ್ಲಿ ವರನ ಕಡೆಯಿಂದ ನಾಲ್ವರು ಹಾಗೂ ವಧುವಿನ ಕಡೆಯಿಂದ ನಾಲ್ವರು ಮತ್ತು ವಧು-ವರರಿಬ್ಬರು ಸೇರಿ 10 ಮಂದಿ ಮಾತ್ರ ಭಾಗಿಯಾಗಿದ್ದರು. ಮೊದಲೇ ನಿಗದಿಯಾದಂತೆ ಇಂದು ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯ ಶ್ರೀಶಿವಪಾರ್ವತಿ ಕೃಪಾ ಸಭಾಭವನದಲ್ಲಿ ಈ ವಿವಾಹ ನಡೆಯಬೇಕಿತ್ತು. ಅಲ್ಲದೆ ಭಾನುವಾರ ನಡೆಯಬೇಕಾದ ಆರತಕ್ಷತೆ ಯನ್ನು ರದ್ದುಪಡಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News