ಬಾರ್‌ಗೆ ನುಗ್ಗಿ ಮದ್ಯ ಕಳವು

Update: 2020-04-09 15:40 GMT

ಶಿರ್ವ, ಎ.9: ಬಂಟಕಲ್ ಶಕ್ತಿ ಬಾರ್‌ಗೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಮದ್ಯ ಕಳವು ಮಾಡಿರುವ ಘಟನೆ ಎ.8ರಂದು ರಾತ್ರಿ ವೇಳೆ ನಡೆದಿದೆ.

ಬಾರ್‌ನ ಹಿಂಬದಿಯ ಮಾಡಿನ ಹೆಂಚನ್ನು ತೆಗೆದು ಒಳನುಗ್ಗಿದ ಕಳ್ಳರು, ಹಿಂದುಗಡೆ ಇರುವ ಸ್ಟೋರ್ ರೂಮ್ನಲ್ಲಿದ್ದ 6 ಬಾಕ್ಸ್ನಲ್ಲಿದ್ದ ವಿವಿಧ ಕಂಪೆನಿಯ ಮದ್ಯದ ಬಾಟಲ್‌ಗಳನ್ನು ಕಳವು ಮಾಡಿದ್ದಾರೆ. ಇವುಗಳ ಒಟ್ಟು ಮೌಲ್ಯ ಸುಮಾರು 15,200ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News