ದನದ ಮಾಂಸ ಸಾಗಾಟ ಆರೋಪ : ಇಬ್ಬರ ಬಂಧನ
Update: 2020-04-09 21:12 IST
ಕಾಪು, ಎ.9: ಸ್ಕೂಟರ್‌ನಲ್ಲಿ ಅಕ್ರಮವಾಗಿ ದನದ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಇಬ್ಬರನ್ನು ಕಾಪು ಪೊಲೀಸರು ಮೂಳೂರು ಗ್ರಾಮದ ಗೋಲ್ಡನ್ ಜನರಲ್ ಸ್ಟೋರ್ ಸಮೀಪ ಎ.8ರಂದು ರಾತ್ರಿ ವೇಳೆ ಬಂಧಿಸಿದ್ದಾರೆ.
ಸವಾರ ಸುರತ್ಕಲ್ ಕೃಷ್ಣಾಪುರದ ಮೊಹಮ್ಮದ್ ಸಫ್ವಾನ್(23) ಹಾಗೂ ಸಹಸವಾರ ಆಸ್ಗರ್ ಆಲಿ(39) ಬಂಧಿತ ಆರೋಪಿಗಳು. ಇವರಿಂದ ಏಳು ಕೆ.ಜಿ. ದನದ ಮಾಂಸ ಹಾಗೂ ಸ್ಕೂಟರನ್ನು ಪೊಲೀಸರು ವಶಪಡಿಸಿಕೊಂಡಿ ದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.