ಎ.14ಕ್ಕೆ ದಲಿತರ ಮನೆಗಳಲ್ಲೇ ಅಂಬೇಡ್ಕರ್ ಹಬ್ಬ ಆಚರಣೆ

Update: 2020-04-09 15:44 GMT

ಉಡುಪಿ, ಎ.9: ಭಾರತದ ಸಂವಿಧಾನದ ಶಿಲ್ಪಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ 129ನೇ ಜನ್ಮದಿನಾಚರಣೆಯನ್ನು ಎ.14ರಂದು ದಲಿತರು ತಮ್ಮ ತಮ್ಮ ಮನೆಗಳಲ್ಲೇ ‘ಅಂಬೇಡ್ಕರ್ ಹಬ್ಬ’ ವನ್ನಾಗಿ ಆಚರಿಸುವಂತೆ ಜನಪರ ಹೋರಾಟಗಾರ ಜಯನ್ ಮಲ್ಪೆ ಮನವಿ ಮಾಡಿದ್ದಾರೆ.

 ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆ ಹಾಗೂ ಸಮಾವೇಶಗಳನ್ನು ನಿಷೇಧಿಸಿದ ಕಾರಣ ಡಾ.ಬಾಬಾ ಸಾಹೇಬ ಅಂಬೇಡ್ಕರ್‌ರ ಜನ್ಮದಿನಾಚರಣೆ ಯನ್ನು ನಾಡಿನ ಎಲ್ಲಾ ಸಂಘಟನೆಗಳು ಆಚರಿಸಲು ಅಸಾದ್ಯವಾದ ಕಾರಣ ದಲಿತರು ತಮ್ಮ ಮನೆಗಳಲ್ಲಿ, ಗುಡಿಸಲುಗಳಲ್ಲೇ ಅಂಬೇಡ್ಕರ್ ಭಾವಚಿತ್ರಕ್ಕೆ ಹೂಹಾರ ಹಾಕಿ ಗೌರವ ಸಲ್ಲಿಸಬೇಕಾಗಿದೆ ಎಂದರು.

 ಅಂದು ರಾತ್ರಿ ಈ ಮಹಾನ್ ಚೇತನದ ಸ್ಮರಣೆಗಾಗಿ ನಾಡಿನಾದ್ಯಂತ ದಲಿತರು ತಮ್ಮ ಮನೆಯಂಗಳದಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ನಮ್ಮ ಅಂಬೇಡ್ಕರ್ -ನಮ್ಮ ಸಂಧಾನ ದ್ಯೇಯವಾಕ್ಯದಡಿ ಸಂಭ್ರಮಿಸಲ್ಲಿದ್ದಾರೆ ಎಂದರು.

ಜಿಲ್ಲೆಯ ವಿವಿಧ ದಲಿತ ಸಂಘಟನೆಗಳು ಕರೆನೀಡಿರುವ ಅಂಬೇಡ್ಕರ್ ಹಬ್ಬ ವನ್ನು ವಿನೂತನ ಮಾದರಿಯಲ್ಲಿ ಎಲ್ಲಾ ದಲಿತ ಬಾಂಧವರು ಶ್ರದ್ಧೆ, ಭಕ್ತಿಯಿಂದ ಆಚರಿಸಿ ಬುದ್ಧ ವಂದನೆ ಸಲ್ಲಿಸಬೆೀಕೆಂದು ಜಯನ್ ಮಲ್ಪೆ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News