ಕೊರೋನ ವೈರಸ್ ನಿಗ್ರಹಕ್ಕಾಗಿ ದ.ಕ.ಜಿಲ್ಲಾ ಮಟ್ಟದಲ್ಲಿ 18 ವಿವಿಧ ಸಮಿತಿ ರಚನೆ

Update: 2020-04-09 16:57 GMT

ಮಂಗಳೂರು, ಎ.9: ಕೊರೋನ ವೈರಸ್ ನಿಗ್ರಹಕ್ಕಾಗಿ ದ.ಕ.ಜಿಲ್ಲಾ ಮಟ್ಟದ 18 ವಿವಿಧ ಸಮಿತಿಗಳನ್ನು ರಚಿಸಿ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಗುರುವಾರ ಪರಿಷ್ಕೃತ ಆದೇಶ ಹೊರಡಿಸಿದ್ದಾರೆ.

*ಆ್ಯಂಬುಲೆನ್ಸ್ ಮತ್ತು ಸಂಚಾರ ನಿರ್ವಹಣೆಗಾಗಿ ಡಾ. ರತ್ನಾಕರ್, ಎಸ್.ಎಸ್. ಅರುಣ್, ನಾಗೇಂದ್ರ, ಮಹಾಲಿಂಗೇಶ್ವರ ಭಟ್, ಮಹಾಬಲ, ಅನಂತ್ ಅವರನ್ನೊಳಗೊಂಡ ಸಮಿತಿ ರಚಿಸಿದ್ದಾರೆ. ಈ ಸಮಿತಿಯು ಎಲ್ಲಾ ಆ್ಯಂಬುಲೆನ್ಸ್‌ಗಳು ಕಾರ್ಯನಿರ್ವಹಿಸುತ್ತಿರುವ ಸ್ಥಿತಿಯಲ್ಲಿದೆ ಮತ್ತು ತಂಡಗಳು ಉತ್ತಮವಾಗಿ ತರಬೇತಿ ಒಡೆದಿದೆ ಎಂಬುದನ್ನು ಖಾತ್ರಿಪಡಿಸಬೇಕು, ಎಲ್ಲಾ ಅಗತ್ಯ ಉಪಕರಣಗಳೊಂದಿಗೆ ಒಂದು ಆ್ಯಂಬುಲೆನ್ಸ್ ವಾಹನವನ್ನು ಮತ್ತು ತಾಲೂಕು ತುರ್ತು ತಂಡದ ಬಳಕೆಗೆ ಒದಗಿಸುವುದು, ಜಿಲ್ಲಾಧಿಕಾರಿಗಳ ಮೂಲಕ ಗೊತ್ತುಪಡಿಸಲಾದ ಯಾವುದೇ ಇತರ ಚಟುವಟಿಕೆಗಳನ್ನು ನಿರ್ವಹಿಸುವುದು.
*ಜ್ವರದ ಕ್ಲಿನಿಕ್‌ಗಳ ನಿರ್ವಹಣೆಗಾಗಿ ಡಾ. ರಾಮಚಂದ್ರ ಬಾಯರಿ, ಡಾ. ರಾಜೇಶ್, ವೆಂಕಟೇಶ್ ಹುದ್ವಾರ್, ಡಾ. ಸದಾಶಿವ ಶಾನ್‌ಭೋಗ್, ಡಾ. ಶರತ್ ಬಾಬು ಅವರನ್ನೊಳಗೊಂಡ ಸಮಿತಿ ರಚಿಸಲಾಗಿದೆ. ಈ ಸಮಿತಿಯು ಜ್ವರ ಕ್ಲಿನಿಕ್‌ಗಳ ಗುರುತಿಸುವಿಕೆಯನ್ನು ಖಾತ್ರಿಪಡಿಸುವುದು, ಮಾನವ ಶಕ್ತಿ ಮತ್ತು ಉಪಕರಣ ಸಹಿತ ಸೂಕ್ತ ಸಂಪನ್ಮೂಲದೊಂದಿಗೆ ಸಜ್ಜ್ಜುಗೊಳಿಸುವುದು, ಜ್ವರದ ಕ್ಲಿನಿಕ್‌ಗಳಿಂದ ಶೋಧನೆಗೆ ಸಂಬಂಧಿಸಿದ ತರಬೇತಿ ಮತ್ತು ಪ್ರಸ್ತಾವಿತ ಪರೀಕ್ಷೆಯ ಬಗ್ಗೆ ಪ್ರಮಾಣಿತ ಶಿಷ್ಟಾಚಾರ ಪಾಲಿಸುವುದು.

*ತುರ್ತು ಸಂದರ್ಭದ ಕ್ರಿಯಾ ಯೋಜನೆ ಮತ್ತು ನಿರ್ವಹಣೆಗಾಗಿ ಡಾ. ಸೆಲ್ವಮಣಿ, ಡಾ. ರಾಮಚಂದ್ರ ಬಾಯರಿ, ಕೆ. ಆನಂದ ಕುಮಾರ್, ಅಜಿತ್ ಕುಮಾರ್ ಹೆಗ್ಡೆ, ದಿನೇಶ್ ಕುಮಾರ್, ಡಾ. ಸದಾಶಿವ ಶಾನ್‌ಭೋಗ್ ಅವರನ್ನೊಳಗೊಂಡ ಸಮಿತಿ ರಚಿಸಿದ್ದಾರೆ. ಈ ಸಮಿತಿಯು ಆರೋಗ್ಯ ಇಕಾಖೆಯ ಮಾರ್ಗಸೂಚಿಯ ಅನ್ವಯ ತುರ್ತು ಸಂದರ್ಭದ ಯೋಜನೆಯ ಸಿದ್ಧತೆ ಮಾಡುವುದು.

*ಪ್ರಯೋಗಾಲಯ ಸಮಿತಿಯಲ್ಲಿ ಡಾ. ರಾಮಚಂದ್ರ ಬಾಯರಿ, ಡಾ.ಶರತ್, ಡಾ. ಮಧುಸೂದನ್, ಡಾ. ಸುಚಿತ್ರ ಶೆಣೈ ಇದ್ದಾರೆ. ಮಾದರಿ ಸಂಗ್ರಹಣಾ ಕೇಂದ್ರದೊಂದಿಗೆ ಸಮನ್ವಯತೆ ಮತ್ತು ತ್ವರಿತವಾಗಿ ವರದಿಗಳನ್ನು ಒದಗಿಸುವುದು.

*ಸಂಪರ್ಕ ಪತ್ತ್ತೆ ಹಚ್ಚುವಿಕೆ ಸಮಿತಿಯಲ್ಲಿ ಬಿಎಂ ಲಕ್ಷ್ಮಿಪ್ರಸಾದ್, ಅರುಣಾಂಶ ಗಿರಿ, ಲಕ್ಷ್ಮಿಗಣೇಶ್, ಬಿನಾಯಿ, ಡಾ. ಜಗದೀಶ್, ಡಾ.ನವೀನ್‌ಚಂದ್ರ, ವೆಂಕಟೇಶ್ ಜಿ., ಡಾ.ಕಿಶೋರ್, ಡಾ. ಸುಶ್ಮಾ, ಹರೂನ್ ಅಕ್ತರ್, ಡಾ. ಶಿಲ್ಪ ಅವರಿದ್ದಾರೆ. ಪಾಸಿಟಿವ್ ಪ್ರಕರಣ ಪತ್ತೆಯಾದರೆ ಅಂತಹ ವ್ಯಕ್ತಿಯ ಪ್ರಮಾಣ/ಸಂಪರ್ಕದ ಹಿನ್ನಲೆಯನ್ನು ಪತ್ತೆ ಹಚ್ಚುವುದು, ರಾಜ್ಯ ಸಂಪರ್ಕ ಪತ್ತೆ ತಂಡದೊಂದಿಗೆ ಸಮನ್ವಯ ಸಾಧಿಸುವುದು, ಸಂಪರ್ಕ ಪತ್ತೆಯಾದ ವ್ಯಕ್ತಿಗಳ ಖಾತರಿಯಾಗಿ ಇತರ ಏಜೆನ್ಸಿಯೊಂದಿಗೆ ಸಮನ್ವಯ ನಕ್ಷೆಯನ್ನು ಆಯಾಯ ಸ್ಕ್ರೀನಿಂಗ್ ಬಿಂದುಗಳಿಗೆ ವರದಿ ನೀಡುವುದು.

*ನಿರ್ಬಂಧ ತಂಡದಲ್ಲಿ ಡಾ. ಪಿ.ಎಸ್.ಹರ್ಷ, ಬಿಎಂ ಲಕ್ಷ್ಮಿಪ್ರಸಾದ್, ಅರುಣಾಂಶ ಗಿರಿ, ಲಕ್ಷ್ಮಿಗಣೇಶ್, ಡಾ. ವಿಕ್ರಂ ಅಮಟೆ, ಡಾ. ರಾಮಚಂದ್ರ ಬಾಯರಿ, ಡಾ. ಜಗದೀಶ್, ಡಾ. ನವೀನ್‌ಚಂದ್ರ, ಬಿನಾಯ್ ಅವರಿದ್ದಾರೆ. ಜಿಲ್ಲೆಯ ನಿರ್ಬಂಧ ಯೋಜನೆಯ ಸಿದ್ಧತೆ, ಪಾಸಿಟಿವ್ ಪ್ರಕರಣ ವರದಿಯಾದ ಸ್ಥಳದಲ್ಲಿ ಆರೋಗ್ಯ ಇಲಾಖೆಯ ಪ್ರಮಾಣಿತ ಕಾರ್ಯನಿರ್ವಹಣ ಕಾರ್ಯ ವಿಧಾನದ ಅನ್ವಯ ಪ್ರದೇಶಗಳ ನಿರ್ಬಂಧವನ್ನು ಖಾತ್ರಿಪಡಿಸುವುದು.

*ಮೃತದೇಹಗಳನ್ನು ಒಳಗೊಂಡಂತೆ ಜೈವಿಕ ತ್ಯಾಜ್ಯದ ನಿರ್ವಹಣೆ ತಂಡದಲ್ಲಿ ಡಾ. ರಾಜೇಶ್ ಎಸ್‌ಟಿ, ಡಾ. ದಿನೇಶ್ ಕಾಮತ್ ಎಚ್., ಡಾ. ಅಂಬಿಕಾ ಜೆ., ಡಾ. ಸುನೀಲ್ ಕುಮಾರ್, ಡಾ. ರಶ್ಮಿ ಕೆ.ಎಸ್., ಡಾ. ಸುಜಯ್ ಅವರಿದ್ದಾರೆ.

*ಮೇಲ್ವಿಚಾರಣೆ ಮಾಡಿದ ಪ್ರತ್ಯೇಕಿತ ಕೇಂದ್ರಗಳ (ಐಸೋಲೇಶನ್) ನಿರ್ವಹಣೆ ತಂಡದಲ್ಲಿ ಡಾ. ವಿಕ್ರಂ ಅಮಟೆ, ವಿನಯ್ ಗಾಂವ್ಕರ್, ಡಾ. ರಾಮಚಂದ್ರ ಬಾಯರಿ, ಡಾ. ನವೀನ್‌ಚಂದ್ರ, ಡಾ. ಜಗದೀಶ್, ಡಾ. ಸುಜಯ್ ಮತ್ತು ಎಲ್ಲಾ ತಹಶೀಲ್ದಾರರಿದ್ದಾರೆ.

*ಕ್ವಾರಂಟೈನ್ ನಿರ್ವಹಣೆ, ಮೂಲಭೂತ/ಶಿಷ್ಟಾಚಾರ ತಂಡದಲ್ಲಿ ಅಜಿತ್ ಕುಮಾರ್ ಹೆಗ್ಡೆ, ಡಾ. ಸದಾಶಿವ ಶಾನ್‌ಭೋಗ್, ಸಂತೋಷ್, ಯೋಗೀಸ್ ಎಸ್‌ಬಿ, ಗಾಯತ್ರಿ ನಾಯಕ್, ಗೋಕುಲದಾಸ್ ನಾಯಕ್, ಸಚಿನ್ ಕುಮಾರ್, ಮದನ್ ಮೋಹನ್, ಡಾ. ಯತೀಶ್ ಉಳ್ಳಾಲ್, ಡಾ. ವಿಕ್ರಂ ಅಮಟೆ, ವಿನಾಯಕ್ , ಡಾ. ರಾಮಚಂದ್ರ ಬಾಯರಿ, ಎಲ್ಲಾ ತಹಶೀಲ್ದಾರರು ಮತ್ತು ತಾಲೂಕು ವೈದ್ಯಾಧಿಕಾರಿಗಳಿದ್ದಾರೆ. ಕ್ವಾರಂಟೈನ್‌ನಲ್ಲಿ ಮೂಲಭೂತ ಸೌಲಭ್ಯ ಕಲ್ಪಿಸುವುದು.

*ಕೋವಿಡ್ ಆಸ್ಪತ್ರೆಗಳ ನಿರ್ವಹಣಾ ತಂಡದಲ್ಲಿ ಡಾ. ಸೆಲ್ವಮಣಿ, ಡಾ. ಸದಾಶಿವ ಶಾನ್‌ಭೋಗ್, ವಿನಯ ಗಾಂವ್ಕರ್, ಡಾ. ಜಗದೀಶ್, ಡಾ. ಜ್ಯೂಲಿಯನ್ ಸಲ್ದಾನಾ, ಡಾ. ಜಾನ್ ರಾಮ್‌ಪುರಂ ಇದ್ದಾರೆ. ಚಿಕಿತ್ಸೆ ಮತ್ತು ಬಿಡುಗಡೆ ಸಂದರ್ಭ ಎಚ್ಚರಿಕೆ ವಹಿಸುವುದು, ತುರ್ತು ಮೆಡಿಸಿನ್, ಪಿಪಿಇ, ವೆಂಟಿಲೇಟರ್ ಇತ್ಯಾದಿ ಸೌಲಭ್ಯಗಳ ನಿರ್ವಹಣೆ ಮಾಡುವುದು.
*ಬಳಕೆಗಳ ನಿರ್ವಹಣಾ ತಂಡದಲ್ಲಿ ಗೋಕುಲದಾಸ್ ನಾಯಕ್, ಸಂಜಯ್ ಇದ್ದಾರೆ.

*ಖಾಸಗಿ ಸಂಪನ್ಮೂಲಗಳ ಹೆಚ್ಚಳ, ಮಾನವ ಸಂಪನ್ಮೂಲ ಮತ್ತು ಸಾಮರ್ಥ್ಯ ವೃದ್ಧಿ ತಂಡದಲ್ಲಿ ಡಾ. ಸತೀಶ್‌ಚಂದ್ರ, ಡಾ. ಚಿರಾಗ್, ಡಾ. ನವೀನ್‌ಚಂದ್ರ, ಡಾ.ಜಗದೀಶ್, ಸಚಿನ್ ಅವರಿದ್ದಾರೆ. ಎಲ್ಲಾ ವೈದ್ಯಕೀಯ ಮತ್ತ ಅರೆವೈದ್ಯಕೀಯ ಸಿಬ್ಬಂದಿ ವರ್ಗಕ್ಕೆ ತರಬೇತಿ ನೀಡುವುದು, ಸ್ವಯಂ ಸೇವಕರ ಪಟ್ಟಿಯನ್ನು ಸೃಜಿಸುವುದು.

*ಅವಶ್ಯಕ ಸೇವೆಗಳ ಪೂರೈಕೆ ಸರಪಳಿ ನಿರ್ವಹಣೆಯಲ್ಲಿ ಡಾ. ಸೆಲ್ವಮಣಿ, ಕೆ. ಆನಂದ ಕುಮಾರ್, ಡಾ. ವಿಕ್ರಂ ಅಮಟೆ, ಡಾ.ಬಿಟಿ ಮಂಜುನಾಥ್ ಎನ್., ಮುರಳಿ ಮೋಹನ ಚೂಂತಾರು, ವಿನಯ್ ಗಾಂವ್ಕರ್, ವಿವೇಕಾನಂದ ಟಿ., ಎಸ್‌ಆರ್ ಯಳಿಬಳ್ಳಿ, ಆರ್‌ಕೆ ರಾಜು, ರಾಮಕಾಂತ್ ಕುಂಟೆ ಮತ್ತು ಮೆಸ್ಕಾಂನ ಎಲ್ಲಾ ಕಾರ್ಯಪಾಲಕ ಅಭಿಯಂತರರಿದ್ದಾರೆ.

*ಆರ್ಥಿಕತೆ ಮತ್ತು ನಾಗರಿಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಸಮಿತಿಯಲ್ಲಿ ಎಲ್ಲಾ ಉಪವಿಭಾಗಾಧಿಕಾರಿಗಳು, ಎಲ್ಲಾ ತಹಶೀಲ್ದಾರರು, ವಿಲ್ಮಾ, ನಾಗರಾಜ ಅವರಿದ್ದಾರೆ. ಜಿಲ್ಲಾದ್ಯಂತ ಪಿಎಂಜಿಕೆವೈ, ಸಾಮಾಜಿಕ ಪಿಂಚಣಿ ಯೋಜನೆಗಳು ಮತ್ತಿತರ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸುವುದು. ವಲಸೆ ವಿದ್ಯಾರ್ಥಿಗಳ ಸುರಕ್ಷತೆ, ಊಟ, ವಸತಿ ನಿಲಯಗಳಿಗೆ ಸಂಬಂಧಿಸಿದ ದೂರುಗಳ ನಿರ್ವಹಣೆ ಮಾಡುವುದು, ವಲಸೆ ಕಾರ್ಮಿಕರಿಗೆ ಊಟ, ವಸತಿ, ಔಷಧ, ಬಟ್ಟೆ ಮತ್ತಿತರ ವ್ಯವಸ್ಥೆ ಕಲ್ಪಿಸುವುದು.

*ಐಇಸಿ ಮತ್ತು ತರಬೇತಿ ತಂಡದಲ್ಲಿ ಅಜಿತ್ ಕುಮಾರ್ ಹೆಗ್ಡೆ, ಗಾಯತ್ರಿ ನಾಯಕ್, ಪ್ರವೀಣ್ ಬಿ. ನಾಯಕ್, ಸೀತಾ, ಎಚ್.ಆರ್.ನಾಯಕ್, ಕವಿತಾ ಅವರಿದ್ದಾರೆ. ಮೂರು ಪಾಳಿಯಲ್ಲಿ ಕಂಟ್ರೋಲ್ ರೂಂ ಕೆಲಸ ಮಾಡುತ್ತಿರುವ ಬಗ್ಗೆ ಖಾತ್ರಿಪಡಿಸುವುದು, ಗಾಳಿಸುದ್ದಿಯನ್ನು ನಿಗ್ರಹಿಸಲಾಗಿದೆ ಎಂಬುದನ್ನು ಖಾತರಿಪಡಿಸಲು ಸಮೂಹ ಮಾಧ್ಯಮಗಳ ಮೇಲೆ ಗಮನಹರಿಸುವುದು. ಸಾರ್ವಜನಿಕರ ದೂರುಗಳಿಗೆ ಕ್ಷಿಪ್ರಗತಿಯಲ್ಲಿ ಸ್ಪಂದಿಸುವ ತಂಡದೊಂದಿಗೆ ಸಮನ್ವಯತೆ ಸಾಧಿಸುವುದು.
*ಎಂಐಎಸ್ ಮತ್ತು ಐಟಿ ತಂಡದಲ್ಲಿ ಅಶ್ವಿನ್ ಕುಮಾರ್ ರೈ, ರಾಘವೇಂದ್ರ, ಗಣೇಶ್, ಅನಂತ್, ನರೇಂದ್ರ ನಾಯಕ್ ಅವರಿದ್ದಾರೆ.
*ನಿಯಂತ್ರಣ ಕೊಠಡಿ ತಂಡದಲ್ಲಿ ದಿನೇಶ್ ಕುಮಾರ್ ಜಿಟಿ, ವಿಜಯ ಕುಮಾರ್ ಅವರಿದ್ದಾರೆ.

*ಚೆಕ್‌ಪೋಸ್ಟ್,ಮತ್ತು ಗಡಿಗಳ ನಿರ್ವಹಣೆಯಲ್ಲಿ ಅರುಣಾಂಶಗಿರಿ, ಲಕ್ಷ್ಮಿಗಣೇಶ್, ಡಾ. ವಿಕ್ರಂ ಅಮಟೆ, ಡಾ.ಬದ್ರುದ್ದೀನ್, ಯಶವಂತ್, ಗೋಕುಲದಾಸ್ ನಾಯಕ್, ಡಾ. ರಾಮಚಂದ್ರ ಬಾಯರಿ, ಎಲ್ಲಾ ತಾಲೂಕು ವೈದ್ಯಾಧಿಕಾರಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News