×
Ad

ಕಡಂಬು ಜಮಾಅತ್ ಗಲ್ಫ್ ಗೈಸ್ ವತಿಯಿಂದ ದಿನಸಿ ಕಿಟ್ ವಿತರಣೆ

Update: 2020-04-10 12:16 IST

ಕಡಂಬು, ಎ.10: ಲಾಕ್ ಡೌನ್ ನಿಂದಾಗಿ ಅಗತ್ಯ ವಸ್ತುಗಳ ಖರೀದಿಗೆ ಸಮಸ್ಯೆಯಾಗಿದ್ದು, ಇದನ್ನು ಮನಗಂಡು 'ಕಡಂಬು ಜಮಾಅತ್  ಗಲ್ಫ್ ಗೈಸ್' ವತಿಯಿಂದ ಸ್ಥಳೀಯವಾಗಿ ಸಂಕಷ್ಟಕ್ಕೆ ಸಿಲುಕಿದ್ದ ಅರ್ಹರಿಗೆ ದಿನಸಿ ಸಾಮಗ್ರಿಗಳಿಗೆ ಕಿಟ್ ವಿತರಿಸಲಾಯಿತು.

ಕಡಂಬು ಜುಮಾ ಮಸೀದಿಯ ಆಡಳಿತ ಸಮಿತಿಯ ಅಧ್ಯಕ್ಷ ಹಸೈನಾರ್ ಬಿ.ಎಂ. ನೇತೃತ್ವದಲ್ಲಿ ಕಡಂಬು, ಪಿಲಿವಳಚ್ಚಿಳ್ ಹಾಗೂ ಬೆದ್ರಕ್ಕಾಡು ಪರಿಸರದ ಎಲ್ಲ ಜಾತಿ, ಧರ್ಮಗಳ  ಸುಮಾರು 196 ಕುಟುಂಬಗಳಿಗೆ ಕಿಟ್ ವಿತರಿಸಲಾಯಿತು.

ಬದ್ರಿಯಾ ಸೂಪರ್ ಬಜಾರ್ ಕುಡ್ತಮುಗೇರು ಹಾಗೂ ಇದರ ಮಾಲಕರು ಉಚಿತ ವಾಹನ ಸೌಕರ್ಯ ಒದಗಿಸಿ  ಕಿಟ್ ವಿತರಣೆಗೆ ಸಹಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News