ನಿಟ್ಟೆ ಸಮೂಹ ಸಂಸ್ಥೆಯಿಂದ ಕೋವಿಡ್-19 ಪರಿಹಾರ ನಿಧಿಗೆ 1.25 ಕೋ.ರೂ. ದೇಣಿಗೆ

Update: 2020-04-10 08:38 GMT

ಮಂಗಳೂರು, ಎ.10: ದೇಶದಲ್ಲಿ ಕೋವಿಡ್-19 ಅನ್ನು ಎದುರಿಸುತ್ತಿರುವ ಪ್ರಯತ್ನಕ್ಕೆ ಬೆಂಬಲವಾಗಿ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ಮತ್ತು ನಿಟ್ಟೆ ವಿದ್ಯಾಸಂಸ್ಥೆಗಳನ್ನೊಳಗೊಂಡ ಮಂಗಳೂರಿನ ನಿಟ್ಟೆ ಸಮೂಹ ಸಂಸ್ಥೆಯು 1.25 ಕೋ.ರೂ. ನ್ನು ದೇಣಿಗೆಯನ್ನಾಗಿ ನೀಡಿದೆ.

75 ಲಕ್ಷ ರೂ.ನ್ನು ಪ್ರಧಾನ ಮಂತ್ರಿಯವರ ಕೇರ್ಸ್‌ ನಿಧಿಗೆ ಮತ್ತು 50 ಲಕ್ಷ ರೂ.ಗಳನ್ನು ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಲಾಗಿದೆ ಎಂದು ನಿಟ್ಟೆ ಸಮೂಹ ಸಂಸ್ಥೆಯ ಎನ್.ವಿನಯ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ದೇರಳಕಟ್ಟೆಯಲ್ಲಿರುವ ಜಸ್ಟೀಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯು 1,000 ಹಾಸಿಗೆಗಳನ್ನು ಹೊಂದಿದೆ.ಇಲ್ಲಿರುವ ತಜ್ಞ ವೈದ್ಯಕೀಯ ಮತ್ತು ಅನುವೈದ್ಯಕೀಯ ಸಿಬ್ಬಂದಿಯು ರೋಗಿಗಳ ಆರ್ಥಿಕ ಹಿನ್ನೆಲೆಯನ್ನು ಗಣನೆಗೆ ತೆಗೆದುಕೊಳ್ಳದೆ, ಸೇವೆಯೇ ಪ್ರಮುಖ ಧ್ಯೇಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News