ಲಾಕ್ ಡೌನ್ ಬಗ್ಗೆ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

Update: 2020-04-10 09:31 GMT

ಹೊಸದಿಲ್ಲಿ,ಎ.10: ಕೊರೋನ ವೈರಸ್ ಲಾಕ್‌ಡೌನ್ ಮಂಗಳವಾರ ಕೊನೆಗೊಳ್ಳುತ್ತದೆಯೇ ಎಂಬ ಬಗ್ಗೆ ತಮ್ಮ ನಿರ್ಧಾರವನ್ನು ಪ್ರಕಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

 ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರು ಶನಿವಾರ  ವಿಡಿಯೊ  ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಗಳೊಂದಿಗೆ   ಮಾತುಕತೆ ನಡೆಸಲಿದ್ದಾರೆ.

ಲಾಕ್‌ಡೌನ್ ಅನ್ನು ವಿಸ್ತರಿಸಬಹುದು ಆದರೆ ಈ ಸಮಯದಲ್ಲಿ ಅನೇಕ ಬದಲಾವಣೆಯಾಗುವ ಸಾಧ್ಯತೆ ಇದೆ ಮೂಲಗಳು ಹೇಳುತ್ತವೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಅಂತರ್ ರಾಜ್ಯ  ನಡುವೆ ವಾಹನಗಳ ನಿರ್ಬಂಧಿತವಾಗಿರುತ್ತದೆ. ಶಾಲೆಗಳು, ಕಾಲೇಜುಗಳು ಮತ್ತು ಧಾರ್ಮಿಕ ಸಂಸ್ಥೆಗಳು ಮುಚ್ಚಿದ ಸ್ಥಿತಿಯಲ್ಲೇ  ಮುಂದುವರಿಯಲಿದೆ.

ಕೊರೋನ  ವೈರಸ್  ಲಾಕ್ ಡೌನ್ ನಿಂದಾಗಿ ಬಾರತದ ಅರ್ಥ ವ್ಯವಸ್ಥೆಗೆ ಬಲವಾದ ಪೆಟ್ಟು ಬಿದ್ದಿದೆ. ಭಾರತದ ಆರ್ಥಿಕ ಚೇತರಿಕೆಯ ದೃಷ್ಟಿಕೋನ  ತೀವ್ರವಾಗಿ ಬದಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ತನ್ನ ಹಣಕಾಸು ನೀತಿ ವರದಿಯಲ್ಲಿ ತಿಳಿಸಿದೆ.

ವಿಮಾನಯಾನ ಕ್ಷೇತ್ರವು ಹೆಚ್ಚು ಹಾನಿಗೊಳಗಾಗಿದೆ. ಕಾರ್ಯಾಚರಣೆಗಳನ್ನು ಪುನರಾರಂಭಿಸಲು ವಿಮಾನಯಾನ ಸಂಸ್ಥೆಗಳಿಗೆ ಕ್ರಮೇಣ ಅವಕಾಶ ನೀಡಬಹುದು ಆದರೆ ಎಲ್ಲಾ ವರ್ಗಗಳಲ್ಲಿ ಮಧ್ಯದ ಆಸನವನ್ನು ಖಾಲಿ ಇಡುವಂತಹ ನಿಯಮಗಳು  ಜಾರಿಯಾಗಬಹುದು.

ಎಲ್ಲಾ ಪಕ್ಷಗಳ ಮುಖಂಡರೊಂದಿಗೆ ಬುಧವಾರ ನಡೆಸಿದ  ವಿಡಿಯೊ   ಕಾನ್ಫರೆನ್ಸ್  ಮೂಲಕ ಸಭೆಯಲ್ಲಿ ಪ್ರಧಾನಿ ಮೋದಿ ಲಾಕ್‌ಡೌನ್ ಅನ್ನು ೀಗಿನ ಪರಸ್ಥಿತಿಯಲ್ಲಿ "ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.

"ಪ್ರತಿಯೊಂದು ಜೀವವನ್ನೂ ಉಳಿಸುವುದು ಸರ್ಕಾರದ ಆದ್ಯತೆಯಾಗಿದೆ. ದೇಶದ ಪರಿಸ್ಥಿತಿ 'ಸಾಮಾಜಿಕ ತುರ್ತುಸ್ಥಿತಿಯನ್ನು  ಹೋಲುತ್ತದೆ, ಇಂದು  ಕಠಿಣ ನಿರ್ಧಾರಗಳನ್ನು ಅಗತ್ಯವಾಗಿದೆ ಮತ್ತು ನಾವು ಎಚ್ಚರಿಕೆಯಿಂದ  ಮುಂದುವರಿಯಬೇಕು" ಎಂದು ಪ್ರಧಾನಮಂತ್ರಿ  ಹೇಳಿದ್ದರು.

ಮೂರು ವಾರಗಳ ಲಾಕ್‌ಡೌನ್‌ಗೆ ಆದೇಶ ನೀಡಿದ ಪ್ರಧಾನಿ ಮೋದಿ ಅವರ ನಿರ್ಧಾರವು ಸೋಂಕಿನ ಪ್ರಮಾಣವನ್ನು ನಿಧಾನಗೊಳಿಸಲು ಸಹಾಯ ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ವಿಕಾಸ್ ಸ್ವರೂಪ್ ಹೇಳಿದ್ದಾರೆ,

ಲಾಕ್ ಡೌನ್ ದೇಶದ  ಆರ್ಥಿಕತೆಯ ಮೇಲೆ ಮತ್ತು ಸಾವಿರಾರು ಬಡ ಕಾರ್ಮಿಕರ ಮೇಲೆ ಪರಿಣಾಮ ಬೀರಿದೆ. ಲಕ್ಷಾಂತರ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ,  

ಪಿಎಂ ಮೋದಿ ಮಾರ್ಚ್ 25 ರಂದು ಘೋಷಿಸಿದ 21 ದಿನಗಳ ರಾಷ್ಟ್ರವ್ಯಾಪಿ ಲಾಕ್‌ಡೌನ್ ವಿಸ್ತರಣೆಯನ್ನು ಹಲವು ರಾಜ್ಯಗಳು ಕೋರಿವೆ. ಒಡಿಶಾ ನಿನ್ನೆ ಈ ತಿಂಗಳ ಅಂತ್ಯದವರೆಗೆ ಲಾಕ್ ಡೌನ್ ಘೋಷಿಸಿದ ಮೊದಲ ರಾಜ್ಯವಾಯಿತು.

ಕರ್ನಾಟಕವೂ ಇಂದು ವಿಸ್ತರಣೆಯನ್ನು ಪಡೆಯುವ ನಿರೀಕ್ಷೆಯಿದೆ. ಉತ್ತರ ಪ್ರದೇಶ, ತೆಲಂಗಾಣ, ರಾಜಸ್ಥಾನ, ಅಸ್ಸಾಂ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಡ ರಾಜ್ಯಗಳು ದೀರ್ಘ ಲಾಕ್‌ಡೌನ್‌ಗೆ ಕರೆ ನೀಡಿವೆ.

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ  ಕೋವಿಡ್ -19 ಕಾರಣದಿಂದಾಗಿ 33  ಸಾವಿನ ಪ್ರಕರಣಗಳು ವರದಿಯಾಗಿವೆ. ಮೃತಪಟ್ಟವರ ಸಂಖ್ಯೆ 199ಕ್ಕೆ ಏರಿದೆ.  6,412 ಕೊರೋನ ವೈರಸ್  ಪೊಸಿಟಿವ್ ಪ್ರಕರಣಗಳು ದಾಖಲಾಗಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News