"ಭಾರತವೇ ಮೊದಲು ಎಂದದ್ದು ಏನಾಯಿತು?": ಮೋದಿಗೆ ತರೂರ್ ಪ್ರಶ್ನೆ

Update: 2020-04-10 12:32 GMT

ಹೊಸದಿಲ್ಲಿ: ಕೊರೋನ ವೈರಸ್ ಪ್ರಕರಣಗಳಲ್ಲಿ ಪರಿಣಾಮಕಾರಿ ಚಿಕಿತ್ಸೆ ನೀಡಲು ಉಪಯುಕ್ತ ಎಂದು ತಿಳಿಯಲಾದ  ಮಲೇರಿಯಾ ಔಷಧಿ ಹೈಡ್ರೋಕ್ಸಿಕ್ಲೊರೊಕ್ವಿನ್ ಅನ್ನು ಇಸ್ರೇಲ್‍ ಗೆ ಭಾರತ ಸರಕಾರ ಪೂರೈಕೆ ಮಾಡಿದ ಬೆನ್ನಿಗೇ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರ್ ಪ್ರಧಾನಿ ನರೇಂದ್ರ ಮೋದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

"ಸರಕಾರ ಕಡಿಮೆ ಲಭ್ಯವಿರುವ ಔಷಧಿಯನ್ನು ರಫ್ತುಗೊಳಿಸಿದ ನಂತರ ಭಾರತದಲ್ಲಿ ಕೊರತೆಯ ವರದಿಗಳು "ಎಂದು ಟ್ವೀಟ್ ಮಾಡಿದ ಶಶಿ ತರೂರ್  'ಐಬಿ ಟೈಮ್ಸ್' ವರದಿಯೊಂದನ್ನೂ ಟ್ಯಾಗ್ ಮಾಡಿ 'ಇಂಡಿಯಾ ಫಸ್ಟ್ ಎಂದು ಹೇಳಿದ ವ್ಯಕ್ತಿಯ ನೆನಪು ಯಾರಿಗಾದರೂ ಇದೆಯೇ?' ಎಂದು ಪ್ರಶ್ನಿಸಿದ್ದಾರೆ.

ಐಬಿ ಟೈಮ್ಸ್ ವರದಿಯ ಪ್ರಕಾರ ಈ ಔಷಧಿಯನ್ನು ಭಾರತ ಸರಕಾರ ರಫ್ತುಗೊಳಿಸಲು ಅನುಮತಿಸಿದ ನಂತರ ದೇಶದಲ್ಲಿ ಅದರ ಕೊರತೆ ಎದುರಾಗಿದ್ದರಿಂದ  ರಾಜಸ್ಥಾನ ಸರಕಾರ ತಾನು ಖರೀದಿಸಿದ್ದ 300 ಎಂಜಿ ಮಾತ್ರೆಗಳನ್ನು ಮತ್ತೆ ಅವುಗಳನ್ನು ಪೂರೈಸಿದ ಸಂಸ್ಥೆಗೇ ವಾಪಸ್ ನೀಡಬೇಕಾಯಿತು ಎಂದಿತ್ತು.

ಈ ಔಷಧಿ ತಯಾರಿಸಲು ಬೇಕಾದ 5 ಟನ್ ತೂಕದ ಕಚ್ಛಾ ವಸ್ತುಗಳನ್ನು ಹೊತ್ತ ವಿಮಾನ ಇಸ್ರೇಲಿಗೆ ತಲುಪಿದ ಎರಡು  ದಿನಗಳ ನಂತರ ಅಲ್ಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿ ಟ್ವೀಟ್ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News