'ತಬ್ಲೀಗಿ ಜಮಾತ್ ಬಗ್ಗೆ ಝೀ ನ್ಯೂಸ್ ಪ್ರಸಾರ ಮಾಡಿದ ವರದಿ ಸುಳ್ಳು': ಅರುಣಾಚಲ ಪ್ರದೇಶ ಸರಕಾರ

Update: 2020-04-10 14:10 GMT

ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳು ಹೆಚ್ಚುತ್ತಿರುವ ನಡುವೆ ಕೋವಿಡ್ 19 ಹೆಸರಲ್ಲಿ ಹರಡಲಾಗುತ್ತಿರುವ ಸುಳ್ಳುಗಳ ಸಂಖ್ಯೆಯೂ ಹೆಚ್ಚುತ್ತಿದೆ. ಈ ನಡುವೆ ಇಂತಹ ಸುಳ್ಳು ಸುದ್ದಿಗಳನ್ನು ಕೆಲ ಮಾಧ್ಯಮಗಳೇ ಹರಡುತ್ತಿರುವುದೂ ಬೆಳಕಿಗೆ ಬಂದಿದೆ. ಈಗಾಗಲೇ ಇಂತಹ ಸುಳ್ಳುಗಳ ಬಗ್ಗೆ ಫ್ಯಾಕ್ಟ್ ಚೆಕ್ ತಂಡಗಳು, ಸರಕಾರಗಳು ಬಯಲು ಮಾಡಿವೆ. ಇದೀಗ ತಬ್ಲೀಗಿ ಜಮಾಅತ್ ಧಾರ್ಮಿಕ ಸಭೆಗೆ ಸಂಬಂಧಿಸಿ 'ಝೀ ನ್ಯೂಸ್' ಪ್ರಸಾರ ಮಾಡಿದ ವರದಿಯನ್ನು ಅರುಣಾಚಲ ಪ್ರದೇಶ ಅಲ್ಲಗಳೆದಿದೆ.

ತಬ್ಲೀಗಿ ಜಮಾತ್ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿ ಅರುಣಾಚಲ ಪ್ರದೇಶದಲ್ಲಿ 11 ಕೊರೋನ ಪ್ರಕರಣಗಳು ದೃಢಪಟ್ಟಿವೆ ಎಂದು 'ಝೀ ನ್ಯೂಸ್' ಶುಕ್ರವಾರ ವರದಿ ಮಾಡಿತ್ತು. ಈ ಬಗ್ಗೆ ಟ್ವೀಟ್ ಮಾಡಿರುವ ಅರುಣಾಚಲ ಪ್ರದೇಶದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಸುದ್ದಿಯನ್ನು ಸುಳ್ಳು ಎಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅರುಣಾಚಲ ಪ್ರದೇಶದ ಮಾಹಿತಿ ಮತ್ತು ಸಾರ್ಜಜನಿಕ ಸಂಪರ್ಕ ಇಲಾಖೆ, "ಇಂದಿನವರೆಗೆ ಅರುಣಾಚಲ ಪ್ರದೇಶದಲ್ಲಿ ಕೇವಲ 1 ಪ್ರಕರಣ ಮಾತ್ರ ದೃಢಪಟ್ಟಿದೆ. ಝೀ ನ್ಯೂಸ್ ವರದಿ ಮಾಡಿದ್ದು ಸುಳ್ಳು ಮತ್ತು ಇದಕ್ಕೆ ಯಾವುದೇ ಆಧಾರವಿಲ್ಲ" ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News