ಕಾಸರಗೋಡು : ಇಂದು ಮೂವರಲ್ಲಿ ಕೊರೋನ ಸೋಂಕು ದೃಢ

Update: 2020-04-10 14:33 GMT
ಸಾಂದರ್ಭಿಕ ಚಿತ್ರ

ಕಾಸರಗೋಡು : ಜಿಲ್ಲೆಯಲ್ಲಿ  ಶುಕ್ರವಾರ ಮೂವರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಇದರಿಂದ ಸೋಂಕಿತರ ಸಂಖ್ಯೆ 163ಕ್ಕೆ ತಲಪಿದೆ.
ಮುಳಿಯಾರು  ಪೊವ್ವಲ್ ನ  ಇಬ್ಬರು ಮಹಿಳೆಯರು, ಕಾಸರಗೋಡು ನಗರಸಭಾ ವ್ಯಾಪ್ತಿಯ ತಳಂಗರೆಯ ಬಾಲಕ ಒಳಗೊಂಡಿದ್ದಾರೆ. ಮೂವರಿಗೆ ಸಂಪರ್ಕದಿಂದ ಸೋಂಕು ತಗಲಿದೆ.

ಕೇರಳದಲ್ಲಿ ಶುಕ್ರವಾರ 7 ಪ್ರಕರಣ ಪತ್ತೆಯಾಗಿವೆ. ಕಣ್ಣೂರು ಮತ್ತು ಮಲಪ್ಪುರಂ ತಲಾ ಎರಡು ಪ್ರಕರಣ ದೃಢಪಟ್ಟಿವೆ.

ಜಿಲ್ಲೆಯಲ್ಲಿ 10721 ಮಂದಿ ನಿಗಾದಲ್ಲಿದ್ದಾರೆ. ಈ  ಪೈಕಿ 260 ಮಂದಿ  ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.   138 ಮಂದಿ ಈಗ ಚಿಕಿತ್ಸೆ  ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News