×
Ad

ಲಾಕ್‌ಡೌನ್: ಮನೆಯಲ್ಲಿಯೇ ಸರಳವಾಗಿ ಗುಡ್‌ಫ್ರೈಡೆ ಆಚರಣೆ

Update: 2020-04-10 21:00 IST

ಉಡುಪಿ, ಎ.10: ಕ್ರೈಸ್ತ ಸಮುದಾಯದ ಪವಿತ್ರ ದಿನವಾದ ಶುಭ ಶುಕ್ರವಾರ (ಗುಡ್ ಫ್ರೈಡೆ)ವನ್ನು ಉಡುಪಿ ಜಿಲ್ಲೆಯಾದ್ಯಂತ ಲಾಕ್‌ಡೌನ್ ಹಿನ್ನಲೆಯಲ್ಲಿ ಮನೆಯಲ್ಲಿಯೇ ಕ್ರೈಸ್ತ ಬಾಂಧವರು ಉಪವಾಸ ಧ್ಯಾನ ಹಾಗೂ ಪ್ರಾರ್ಥನೆ ಯೊಂದಿಗೆ ಆಚರಿಸಿದರು.

ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ದೇಶದಾ ದ್ಯಂತ ಲಾಕ್‌ಡೌನ್ ಹೇರಿದ್ದು ಉಡುಪಿ ಜಿಲ್ಲೆಯಲ್ಲೂ ಸಹ ಸೆಕ್ಷನ್ 144(3) ಹಿನ್ನೆಲೆಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿಷೇಧ ಇರುವ ಕಾರಣ ಕ್ರೈಸ್ತ ಬಾಂಧವರು ತಮ್ಮ ಮನೆಯಲ್ಲಿಯೇ ಇದ್ದು ಪ್ರಾರ್ಥನೆ, ಧ್ಯಾನ, ಯೇಸುವಿನ ಶಿಲುಬೆಯ ಹಾದಿಯ ವಾಚನವನ್ನು ಜರುಗಿಸಿದರು.

ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ.ಜೆರಾಲ್ಢ್ ಐಸಾಕ್ ಲೋಬೊ ಅವರು ತಮ್ಮ ನಿವಾಸದ ಪ್ರಾರ್ಥನಾಲಯದಲ್ಲಿಯೇ ಖಾಸಗಿಯಾಗಿ ಗುಡ್ ಫ್ರೈಡೆ ಪ್ರಾರ್ಥನಾ ವಿಧಿಯನ್ನು ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News