ವಲಸೆ ಕಾರ್ಮಿಕರಿಗೆ ಉಚಿತ ಆಹಾರ ಸಾಮಗ್ರಿ ವಿತರಣೆ
Update: 2020-04-10 21:01 IST
ಬೈಂದೂರು, ಎ.10: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬೈಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರ, ಸೂರ್ಕುಂದ ಮತ್ತು ಗಂಗನಾಡ ರಸ್ತೆಯ ಬಾಡಾ ಪ್ರದೇಶದ ನಿವಾಸಿಗಳು, ಕುಟುಂಬದ ಪಡಿತರ ಚೀಟಿ ರಹಿತ 23 ಮಂದಿ ವಲಸೆ ಕಾರ್ಮಿಕ ಕುಟುಂಬಗಳಿಗೆ ಆಹಾರದ ಸಾಮಗ್ರಿಗಳನ್ನು ವಿತರಿಸ ಲಾಯಿತು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಕೋಣಿ ವಿಶೇಷ ಮನವಿಗೆ ಸ್ಪಂದಿಸಿದ ಕೋಟೇಶ್ವರದ ಯುವ ಮೆರೇಡಿಯನ್ ಸಂಸ್ಥೆಯ ಉದಯಕುಮಾರ ಶೆಟ್ಟಿ ಈ ಆಹಾರ ಸಾಮಾಗ್ರಿಗಳನ್ನು ಕೊಡ ಮಾಡಿದ್ದಾರೆ. ಅವರಿಗೆ ಸಂಘದ ವತಿಯಿಂದ ಅಭಿನಂದಿಸಲಾಯಿತು.