ಕೋವಿಡ್ 19: ಕರ್ತವ್ಯಕ್ಕೆ ಹಾಜರಾಗಲು ಕಣ್ಣನ್ ಗೋಪಿನಾಥನ್ ಗೆ ಸರಕಾರದ ಸೂಚನೆ

Update: 2020-04-10 15:38 GMT

ಹೊಸದಿಲ್ಲಿ: ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಕರ್ತವ್ಯಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತ ಸೇರ್ಪಡೆಯಾಗಬೇಕು ಎನ್ನುವ ಸರಕಾರದ ಆದೇಶವನ್ನು ಮಾಜಿ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್ ತಿರಸ್ಕರಿಸಿದ್ದಾರೆ. ತಾನು ಸಾಮಾನ್ಯ ನಾಗರಿಕನಾಗಿ ಕೊರೋನ ಹೋರಾಟದಲ್ಲಿ ಕೈಜೋಡಿಸುತ್ತೇನೆ ಹೊರತು ಐಎಎಸ್ ಅಧಿಕಾರಿಯಾಗಿ ಅಲ್ಲ ಎಂದವರು ಹೇಳಿದ್ದಾರೆ.

ಕಣ್ಣನ್ ಗೋಪಿನಾಥನ್ ಅವರ ರಾಜೀನಾಮೆಯನ್ನು ಇದುವರೆಗೂ ಸ್ವೀಕರಿಸದ ಕಾರಣ ಸರಕಾರ ಕರ್ತವ್ಯಕ್ಕೆ ಹಾಜರಾಗುವಂತೆ ಅವರಿಗೆ ಸೂಚನೆ ನೀಡಿದೆ. ಇದು ಸರಕಾರದ ಕಿರುಕುಳ ಕೃತ್ಯ ಎಂದು ಗೋಪಿನಾಥನ್ ಹೇಳಿದ್ದಾರೆ.

ಸರಕಾರದ ಆದೇಶದ ಪ್ರತಿಯನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, "ನಾನು ರಾಜೀನಾಮೆ ಸಲ್ಲಿಸಿ 8 ತಿಂಗಳುಗಳು ಕಳೆದಿವೆ. ಸರಕಾರಕ್ಕೆ ತಿಳಿದಿರುವ ಒಂದೇ ವಿಚಾರವೆಂದರೆ ಅದು ಕಿರುಕುಳ. ಮುಂದೆಯೂ ಅವರು ಕಿರುಕುಳ ನಡೆಸುತ್ತಾರೆ ಎನ್ನುವುದು ನನಗೆ ತಿಳಿದಿದೆ. ಆದರೆ ಈ ಸಂಕಷ್ಟದಲ್ಲಿ ಸಮಯದಲ್ಲಿ ನಾನು ಸ್ವಯಂಪ್ರೇರಿತನಾಗಿ ಸಹಾಯ ಮಾಡಲು ಇಚ್ಛಿಸುತ್ತೇನೆ. ಆದರೆ ಐಎಎಸ್ ಅಧಿಕಾರಿಯಾಗಿ ಅಲ್ಲ" ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News