ಕೊರೋನ ವೈರಸ್: ದ.ಕ.ಜಿಲ್ಲೆ: ಶುಕ್ರವಾರ ಯಾರದೇ ಸ್ಕ್ರೀನಿಂಗ್ ಇಲ್ಲ
ಮಂಗಳೂರು, ಎ.10: ಕೊರೋನ ವೈರಸ್ ರೋಗ ತಡೆಯುವ ನಿಟ್ಟಿನಲ್ಲಿ ದ.ಕ.ಜಿಲ್ಲಾಡಳಿತವು ವಿವಿಧ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಮುಂದುವರಿಸಿದೆ. ಈ ಮಧ್ಯೆ ಶುಕ್ರವಾರ ಯಾರದೋ ಸ್ಕ್ರೀನಿಂಗ್ ಮಾಡಿಲ್ಲ. ಆದಾಗ್ಯೂ ಈವರೆಗೆ 38,813 ಮಂದಿಯ ಸ್ಕ್ರೀನಿಂಗ್ ಮಾಡಲಾ ಗಿದೆ. ಶುಕ್ರವಾರ ಪ್ರಯೋಗಾಲಯದಿಂದ ಯಾರದೇ ವರದಿ ಬಂದಿಲ್ಲ. ಈ ಮಧ್ಯೆ ಶುಕ್ರವಾರ 21 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.
ಗುರುವಾರದವರೆಗೆ 3,352 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರೆ, ಶುಕ್ರವಾರ ಅದರ ಸಂಖ್ಯೆಯು 2,945ಕ್ಕೆ ಇಳಿದಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಇದೀಗ ಯಾರೂ ಕ್ವಾರಂಟೈನ್‌ನಲ್ಲಿಲ್ಲ. ಆದರೆ ಇಎಸ್‌ಐ ಆಸ್ಪತ್ರೆಯಲ್ಲಿ 15 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. ಶುಕ್ರವಾರ 28 ದಿನದ ಕ್ವಾರಂಟೈನ್ (ನಿಗಾ) ಅವಧಿಯನ್ನು 2,979 ಮಂದಿ ಪೂರೈಸಿದ್ದಾರೆ.
ಈವರೆಗೆ 402 ಮಂದಿಯ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಆ ಪೈಕಿ 356 ಮಂದಿಯ ವರದಿಯನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 344 ಮಂದಿಯ ವರದಿಯು ನೆಗೆಟಿವ್ ಆಗಿದ್ದರೆ, 12 ಮಂದಿಯ ವರದಿಯು ಪಾಸಿಟಿವ್ ಆಗಿತ್ತು. ಪಾಸಿಟಿವ್‌ಗಳ ಪೈಕಿ 5 ಮಂದಿ ಗುಣಮುಖರಾಗಿ ವೆನ್ಲಾಕ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದ 7 ಮಂದಿ ಚೇತರಿಸುತ್ತಿದ್ದಾರೆ. ಇನ್ನೂ 46 ಮಂದಿಯ ವರದಿಗಾಗಿ ನಿರೀಕ್ಷಿಸಲಾಗುತ್ತಿದೆ. 9 ಮಂದಿ ಇತರ ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದಾರೆ.
ದ.ಕ.ಜಿಲ್ಲೆಯ 13 ಕಡೆ ಆರಂಭಿಸಲಾದ ಜ್ವರದ ಪ್ರಯೋಗಾಲಯದಲ್ಲಿ ಶುಕ್ರವಾರ 84 ಮಂದಿಯ ತಪಾಸಣೆ ಮಾಡಲಾಗಿದೆ. ಆದರೆ ಶಂಕಿತ ಕೊರೋನ ಸೋಂಕು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.