ಆಹಾರದ ಪೊಟ್ಟಣ ನೀಡಿದ ಪೊಲೀಸರಿಗೆ ಅಪರಿಚಿತನಿಂದ ಸಾಮಾಜಿಕ ಅಂತರದ ಪಾಠ

Update: 2020-04-10 16:38 GMT

ತಿರುವನಂತಪುರ, ಎ.10: ಮುಚ್ಚಿದ  ಅಂಗಡಿಯ ಜಗಲಿಯಲ್ಲಿ  ಕುಳಿತಿದ್ದ  ಮನೆಯಿಲ್ಲದ ವ್ಯಕ್ತಿಯೊಬ್ಬನು ತನಗೆ ಆಹಾರ ನೀಡಲು ಬಂದ ಪೊಲೀಸರಿಗೆ ಸಾಮಾಜಿಕ ಅಂತರದ ಪಾಠ ಹೇಳಿದ ಘಟನೆ ಕೇರಳದ  ಕೋಝಿಕ್ಕೋಡ್ ಜಿಲ್ಲೆಯ ಪೆರಾಂಬ್ರಾದಲ್ಲಿ ನಡೆದಿದೆ.

ಪೆರಾಂಬ್ರಾ ಸಬ್ ಇನ್ಸ್‌ಪೆಕ್ಟರ್ ರವೂಫ್  ಪಿಕೆ ಮತ್ತು  ಅವರೊಂದಿಗಿದ್ದ ಪೊಲೀಸ್ ಸಿಬ್ಬಂದಿಗಳನ್ನು  ಶ್ರೀಜಿತ್ ಮತ್ತು ಬಶೀರ್  ಆತನಿಗೆ  ಆಹಾರವನ್ನು ನೀಡುತ್ತಿರುವ ದೃಶ್ಯ. ಆಹಾರ ತೆಗೆದುಕೊಳ್ಳುವ ಮೊದಲು ಆತ ಪೊಲೀಸರಿಗೆ ಸಾಮಾಜಿಕ ಅಂತರ ಕಾಪಾಡುವಂತೆ ಹೇಳುವುದು  ಹಾಗೂ  ಪೊಲೀಸರು ಮರು ಮಾತಾನಾಡದೆ ಆತ ಹೇಳಿದಲ್ಲೇ ಊಟದ ಪೊಟ್ಟಣವನ್ನು ಇಟ್ಟು ವಾಪಸಾಗುವ ದೃಶ್ಯ ಸ್ಥಳೀಯ ಅಂಗಡಿಯ ಮುಂದೆ   ಅಳವಡಿಸಲಾದ ಕ್ಲೋಸ್-ಸರ್ಕ್ಯೂಟ್ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

ಗಸ್ತಿನಲ್ಲಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ರವೂಫ್ ಪಿಕೆ  ಅಂಗಡಿ ಮುಂದೆ ಮಲಗಿದ್ದ    ವ್ಯಕ್ತಿಯಲ್ಲಿ ನೀನು ಏನಾದರೂ ಆಹಾರ ತೆಗೆದುಕೊಂಡಿದ್ದಿಯಾ  ಎಂದು ಕೇಳುತ್ತಾರೆ   ಇಲ್ಲ  ಎಂದು ಆತ  ಇಲ್ಲ ಹೇಳುತ್ತಾನೆ.  ಆಗ ಪೊಲೀಸರು  ಒಬ್ಬರಿಗೊಬ್ಬರು ಮಾತಾಡುತ್ತಾರೆ.  ಸಬ್ ಇನ್ಸ್ ಪೆಕ್ಟರ್  ತನ್ನೊಂದಿಗೆ ಇರುವ  ಪೊಲೀಸ್ ಸಿಬ್ಬಂದಿಯ ಬಳಿ ಊಟ ತರುವಂತೆ ಹೇಳುತ್ತಾರೆ.  ಪೊಲೀಸ್ ಸಿಬ್ಬಂದಿ ಆಹಾರ ಪ್ಯಾಕೆಟ್ ಮತ್ತು ನೀರಿನ ಬಾಟಲಿಯೊಂದಿಗೆ ವಾಪಸಾಗುತ್ತಾರೆ.

ಅಪರಿಚಿತನಿಗೆ  ಆಹಾರವನ್ನು ನೀಡಲು ಮುಂದಾಗುತ್ತಿದ್ದಂತೆ, ಅವರನ್ನು  ತಡೆದು ನಿಲ್ಲಿಸಿದ ಆ ವ್ಯಕ್ತಿ  ಕಲ್ಲಿನಿಂದ ವೃತ್ತವನ್ನು ಎಳೆಯುತ್ತಾನೆ ಮತ್ತು ಆಹಾರವನ್ನು ಅಲ್ಲಿ ಬಿಡಲು ಹೇಳುತ್ತಾನೆ. ಪೊಲೀಸ್  ಸಿಬ್ಬಂದಿ ಆತ ಹೇಳಿದಂತೆ ಆಹಾರ ಮತ್ತು ನೀರನ್ನು ಇಟ್ಟು ಹೋಗುತ್ತಾರೆ. ಅರಿಚಿತ ವ್ಯಕ್ತಿ ಅಂಗಿಯೊಂದನ್ನು ಮಾಸ್ಕ್ ಆಗಿ ಕಟ್ಟಿಕೊಂಡಿದ್ದನು.

ಪಿಎಸ್ ಐ ತನ್ನ ವಾಹನದಲ್ಲಿ ತನಗಾಗಿ ಆಹಾರದ ಪೊಟ್ಟಣವನ್ನು ಇಟ್ಟುಕೊಂಡಿದ್ದರು. ಆದರೆ ಅವರು ಹಸಿದವನಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಈ ದೃಶ್ಯದ ವಿಡಿಯೊ ಸಾಮಾಜಿಕ ಜಾಲಾ ತಾಣಗಳಲ್ಲಿ ವೈರಲ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News