×
Ad

ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದಿಂದ ಕಿಟ್ ವಿತರಣೆ

Update: 2020-04-10 22:13 IST

ಮಂಗಳೂರು, ಎ.10: ಕೊರೋನ ವೈರಸ್ ರೋಗದಿಂದ ಸಂಕಷ್ಟದಲ್ಲಿರುವ ಜನತೆಯೆ ನೆರವಿಗೆ ಧಾವಿಸಿರುವ ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘವು ಇತ್ತೀಚೆಗೆ ನಗರದ ಗೋಕುಲ್ ಸಭಾಭವನದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಆಹಾರದ ಕಿಟ್ ವಿತರಿಸಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೊಟ ಶ್ರೀನಿವಾಸ ಪೂಜಾರಿ, ಶಾಸಕ ಡಾ. ವೈ.ಭರತ್ ಶೆಟ್ಟಿ, ಮೇಯರ್ ದಿವಾಕರ್ ಪಾಂಡೇಶ್ವರ್, ಮನಪಾ ಅಯುಕ್ತ ಶಾನಾಡಿ ಅಜಿತ್ ಕುಮಾರ್ ಮಾತನಾಡಿದರು.

ಕೊರೋನ ವೈರಸ್‌ನಿಂದಾಗಿ ಕ್ಯಾಟರಿಂಗ್ ಉದ್ಯಮ ಸಂಕಷ್ಟದಲ್ಲಿದೆ. ಹಾಗಾಗಿ ತೆರಿಗೆ ವಿನಾಯಿತಿ ಅಥಾವ ತೆರಿಗೆ ಕಡಿತ ಮಾಡಬೇಕು ಎಂದು ಈ ಸಂದರ್ಭ ಸಂಘದ ಮುಖಂಡರು ಸಚಿವರಿಗೆ ಮನವಿ ಮಾಡಿದರು.

ದ.ಕ.ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ಅಧ್ಯಕ್ಷ ಸತೀಶ್ ಬೋಳಾರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮನಪಾ ಸದಸ್ಯರಾದ ಮನೋಹರ್ ಶೆಟ್ಟಿ, ಶಕೀಲ ಕಾವಾ, ಶ್ರೀಕ್ಷೇತ್ರ ಕದ್ರಿಯ ಮೊಕ್ತೇಸರ ದಿನೇಶ್ ದೇವಾಡಿಗ ಅತಿಥಿಗಳಾಗಿ ಭಾಗವಹಿಸಿದ್ದರು.

ಸಂಘದ ಸ್ಥಾಪಕ ಸಲಹೆಗಾರರಾದ ವಿಜಯ್ ಕುಮಾರ್ ಎಸ್.ಆರ್, ಪ್ರಸಾದ್ ಅಂಚನ್, ಬಾಲಕೃಷ್ಣ ಕುಕ್ಯಾನ್, ಯಶವಂತ್ ಪಚ್ಚನಾಡಿ, ಸಂಘದ ಗೌರವ ಅಧ್ಯಕ್ಷ ಸುಧಾಕರ್ ಕಾಮಾತ್, ಇಕ್ಬಾಲ್, ವಿವೇನ್ ಲಸ್ರದೋ, ಸಂಘದ ಉಪಾಧ್ಯಕ್ಷ ವಿದ್ಯಾಧರ್ ನಾಗ್ವೇಕರ್, ಗೋಕುಲ್ ಕದ್ರಿ, ದೀಪಕ್ ಕೋಟ್ಯಾನ್, ವಿಶ್ವನಾಥ್, ಕರ್ಣ ಉಪಸ್ಥಿತರಿದ್ದರು.

ಸಂಘದ ಸಂಘಟನಾ ಕಾರ್ಯದರ್ಶಿ ರಾಜ್ ಗೋಪಾಲ್ ರೈ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ದೀಪಕ್ ಕೋಟ್ಯಾನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News