ಕಡಬ : ಭಾರೀ ಗಾಳಿ, ಮಳೆ
Update: 2020-04-10 22:42 IST
ಕಡಬ: ಸುಬ್ರಹ್ಮಣ್ಯ, ನೆಲ್ಯಾಡಿ, ಸವಣೂರು, ಪಂಜ ಸೇರಿದಂತೆ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಗುಡುಗು ಸಹಿತ ಅಕಾಲಿಕ ಮಳೆಯಿಂದಾಗಿ ಅಡಿಕೆ ಕೃಷಿಕರು ತಮ್ಮ ಅಂಗಳದಲ್ಲಿ ಹಾಕಿದ್ದ ಅಡಕೆಯನ್ನು ಮುಚ್ಚಲು ಒದ್ದಾಡುತ್ತಿರುವುದು ಕಂಡು ಬಂತು.
ಕೆಲ ಭಾಗಗಳಲ್ಲಿ ಸುಳಿಗಾಳಿಯಂತೆ ಗಾಳಿ ಬೀಸಿದ್ದು, ಜನತೆ ಆತಂಕಗೊಂಡಿದ್ದಾರೆ. ಗಾಳಿ ಮಳೆಗೆ ವಿದ್ಯುತ್ ಕೈ ಕೊಟ್ಟಿದ್ದು ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.