ಇಟಲಿಯಲ್ಲಿ ಕೊರೋನವೈರಸ್‌ಗೆ 100 ವೈದ್ಯರು, 30 ನರ್ಸ್‌ಗಳು ಬಲಿ

Update: 2020-04-10 17:18 GMT

ರೋಮ್ (ಇಟಲಿ), ಎ. 10: ಮಾರಕ ಸಾಂಕ್ರಾಮಿಕ ರೋಗ ನೋವೆಲ್-ಕೊರೋನ ವೈರಸ್ ಫೆಬ್ರವರಿಯಲ್ಲಿ ಇಟಲಿಗೆ ಕಾಲಿರಿಸಿದಂದಿನಿಂದ ಆ ದೇಶದಲ್ಲಿ ಸುಮಾರು 100 ವೈದ್ಯರು ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ದೇಶದ ಆರೋಗ್ಯ ಸಂಘಟನೆಯೊಂದು ಗುರುವಾರ ತಿಳಿಸಿದೆ.

‘‘ಕೋವಿಡ್-19ಗೆ ಬಲಿಯಾದ ವೈದ್ಯರ ಸಂಖ್ಯೆ 100. ಬಹುಶಃ ಈಗ ಅದು 101 ಆಗಿರಲೂಬಹುದು’’ ಎಂದು ಎಫ್‌ಎನ್‌ಒಎಮ್‌ಸಿಇಒ ಸಂಘಟನೆಯ ವಕ್ತಾರರೊಬ್ಬರು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.

ಮೃತ ವೈದ್ಯರಲ್ಲಿ ನಿವೃತ್ತ ವೈದ್ಯರೂ ಸೇರಿದ್ದಾರೆ. ಕೊರೋನವೈರಸ್ ವಿರುದ್ಧ ಹೋರಾಡಲು ಇಟಲಿ ಸರಕಾರವು ಒಂದು ತಿಂಗಳ ಹಿಂದೆ ನಿವೃತ್ತ ವೈದ್ಯರನ್ನೂ ನಿಯೋಜಿಸಿತ್ತು.

ಇಟಲಿಯಲ್ಲಿ ಕೊರೋನ ವೈರಸ್‌ನಿಂದಾಗಿ ಈವರೆಗೆ ಒಟ್ಟು 17,669 ಮಂದಿ ಸಾವಿಗೀಡಾಗಿದ್ದಾರೆ. ಇದು ವಿಶ್ವದಲ್ಲೇ ಅಧಿಕವಾಗಿದೆ. 30 ನರ್ಸ್‌ಗಳು ಮತ್ತು ಸಹಾಯಕ ನರ್ಸ್‌ಗಳೂ ನೋವೆಲ್-ಕೊರೋನವೈರಸ್‌ಗೆ ಬಲಿಯಾಗಿದ್ದಾರೆ ಎಂದು ಇಟಲಿಯ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News