ಇರಾನ್: ಮತ್ತೆ 122 ಸಾವು

Update: 2020-04-10 18:06 GMT

ಟೆಹರಾನ್, ಎ. 10: ದೇಶದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 122 ಸಾವುಗಳು ಸಂಭವಿಸಿವೆ ಎಂದು ಇರಾನ್ ಶುಕ್ರವಾರ ವರದಿ ಮಾಡಿದೆ. ಇದರೊಂದಿಗೆ ಆ ದೇಶದಲ್ಲಿ ಕೊರೋನವೈರಸ್‌ನಿಂದಾಗಿ ಮೃತಪಟ್ಟವರ ಸಂಖ್ಯೆ 4,232ಕ್ಕೆ ಏರಿದೆ. ಇದೇ ಅವಧಿಯಲ್ಲಿ 1,972 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದೇಶದಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಸಂಖ್ಯೆ 68,192ಕ್ಕೆ ಏರಿದೆ.

ಅಮೆರಿಕ: 1,600ಕ್ಕೂ ಹೆಚ್ಚು ಸಾವು

ಅಮೆರಿಕದಲ್ಲಿ ಗುರುವಾರ ನೋವೆಲ್-ಕೊರೋನವೈರಸ್‌ನಿಂದಾಗಿ 1,600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ದೇಶದ ಕೆಲವು ರಾಜ್ಯಗಳು ಸಾವಿನ ಸಂಖ್ಯೆಗಳನ್ನು ಇನ್ನಷ್ಟೇ ವರದಿ ಮಾಡಬೇಕಾಗಿದೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 16,400ನ್ನು ದಾಟಿದೆ. ಅಲ್ಲಿನ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 4,59,000ವನ್ನು ಮೀರಿದೆ.

ಸ್ಪೇನ್: ದಿನದಲ್ಲಿ 605 ಸಾವು; ಸಾವಿನ ಸಂಖ್ಯೆಯಲ್ಲಿ ಇಳಿಕೆ

ಸ್ಪೇನ್‌ನಲ್ಲಿ ಕೊರೋನವೈರಸ್‌ನಿಂದಾಗಿ ಗುರುವಾರ 605 ಮಂದಿ ಮೃತಪಟ್ಟಿದ್ದಾರೆ. ಇದು 17 ದಿನಗಳ ಅವಧಿಯಲ್ಲಿ ಆ ದೇಶದಲ್ಲಿ ದಾಖಲಾದ ಕನಿಷ್ಠ ಸಾವಿನ ಸಂಖ್ಯೆಯಾಗಿದೆ.

ಕೋವಿಡ್-19 ಸಾಂಕ್ರಾಮಿಕದ ಭೀಕರ ದಾಳಿಗೆ ಒಳಗಾಗಿರುವ ದೇಶಗಳ ಪೈಕಿ ಒಂದಾಗಿರುವ ಸ್ಪೇನ್‌ನಲ್ಲಿ ಈಗ ಮೃತಪಟ್ಟವರ ಒಟ್ಟು ಸಂಖ್ಯೆ 15,843ಕ್ಕೆ ಏರಿದೆ. ಅದೇ ವೇಳೆ, ಕೊರೋನ ವೈರಸ್ ವಿರುದ್ಧದ ಹೋರಾಟವನ್ನು ಮುಂದುವರಿಸುವಂತೆ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ಜನರನ್ನು ಒತ್ತಾಯಿಸಿದ್ದಾರೆ.

ದೇಶದಲ್ಲಿ ಈಗ ಕೋವಿಡ್-19 ಸೋಂಕಿತರ ಒಟ್ಟು ಸಂಖ್ಯೆ 1,57,022ಕ್ಕೆ ಏರಿದೆ. ಅಲ್ಲಿ ಒಂದು ದಿನದ ಅವಧಿಯಲ್ಲಿ 4,576 ಹೊಸ ಸೋಂಕು ಪ್ರಕರಣಗಳು ದಾಖಲಾಗಿವೆ. ಅದೇ ವೇಳೆ, 50,000ಕ್ಕೂ ಅಧಿಕ ಮಂದಿ ಸೋಂಕಿನಿಂದ ಗುಣ ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News