ಲಾಕ್ ಡೌನ್ ನಿಂದ ವ್ಯಾಪಾರಿಗಳು ಸಂಕಷ್ಟಕ್ಕೆ : ಎಸ್.ಡಿ‌.ಪಿ.ಐ.

Update: 2020-04-10 18:06 GMT

ಮಂಗಳೂರು: ಕೊರೋನ ವೈರಸ್ ಭೀತಿಯಿಂದ ದ.ಕ ಜಿಲ್ಲಾಡಳಿತದ ಕೆಲವೊಂದು ಅವೈಜ್ಞಾನಿಕ ನಿರ್ಧಾರಗಳಿಂದ ಮತ್ತು ಗೊಂದಲಕಾರಿ ಹೇಳಿಕೆ ಹಾಗೂ ಅದನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಎಡವಟ್ಟುಗಳು ಪದೇ ಪದೇ ಸಂಭವಿಸುತ್ತಾ ಇರುವುದರಿಂದ ಜನಸಾಮಾನ್ಯರು ಮತ್ತು ವ್ಯಾಪಾರಿಗಳು ಇನ್ನಷ್ಟು ಸಂಕಷ್ಟಗಳನ್ನು ಎದುರಿಸುಂತಾಗಿದೆ ಎಂದು ಎಸ್.ಡಿ.ಪಿ.ಐ ದ.ಕ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ತಿಳಿಸಿದ್ದಾರೆ.

ದಿನಸಿ, ಹಾಲು, ತರಕಾರಿ ಇನ್ನಿತರ ವ್ಯಾಪಾರಿಗಳಿಗೆ ಬೆಳಗ್ಗೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂಗಡಿಗಳನ್ನು ತೆರೆಯಬಹುದೆಂಬ  ಅನುಮತಿ ಇದೆ. ಆದರೆ ಇವರಿಗೆ ಅಂಗಡಿಗಳಿಗೆ ಸಾಮಗ್ರಿಗಳನ್ನು ತರಲು ಅಂಗಡಿ ಬಿಟ್ಟು ಹೊರಗಡೆ ಹೋಗುವಾಗ ಪೊಲೀಸರು ಪಾಸ್ ಗಳು ಇಲ್ಲದೆ ಇರುವವರನ್ನು ಬಿಡುತ್ತಿಲ್ಲ, ಪಾಸ್ ನ ವಿಚಾರವಾಗಿ ಉಪ ವಿಭಾಗಧಿಕಾರಿಯಲ್ಲಿ ಕೇಳಿದರೆ Online ನಲ್ಲಿ ತೆಗೆಯಲು ಹೇಳುತ್ತಾರೆ, ಶಾಸಕರ ಪಿಎ ಹತ್ತಿರ ಕೇಳಿದಾಗ ಪಾಸ್ ಕೊಡುವುದು ಸ್ಥಗಿತಗೊಂಡಿದೆ ಎಂದು ಹೇಳುತ್ತಾರೆ, ಜಿಲ್ಲಾಡಳಿತವನ್ನು ಸಂಪರ್ಕಿಸುವಾಗ  ಇಪ್ಪತ್ತೈದು ಸಾವಿರ ಪಾಸ್ ಗಳಿಗೆ ಬೇಡಿಕೆ ಬಂದಿದೆ, ಹದಿನಾರು ಸಾವಿರ ಪಾಸ್ ಇಸ್ಯೂ ಮಾಡಿದ್ದೇವೆ ಎಂಬ ಉತ್ತರ ಬರುತ್ತಿವೆ ಯಾರಲ್ಲೂ ಸರಿಯಾದ ಮಾಹಿತಿ ಇಲ್ಲದೆ ಗೊಂದಲದ ರೀತಿಯಲ್ಲಿ ಹೇಳಿಕೆ ನೀಡುತ್ತಿದ್ದಾರೆ ಆದರೆ ಹೆಚ್ಚಿನ ದಿನಸಿ ವ್ಯಾಪಾರಿಗಳಿಗು ಪಾಸ್ ದೊರಕಿಲ್ಲ, ಅದೇ ರೀತಿಯಲ್ಲಿ ಸದ್ಯ ಸಾಮಾಜಿಕ ಅಂತರವನ್ನು ಕಾಪಾಡುವ ಸಲುವಾಗಿ ತಾತ್ಕಾಲಿಕ ಮಾರುಕಟ್ಟೆ ನಡೆಸಲು ಸ್ಟೇಟ್ ಬ್ಯಾಂಕ್ ಹಳೇ ಬಸ್ಟಾಂಡ್ ಪಕ್ಕದಲ್ಲಿ ಮತ್ತು ಕಂಕನಾಡಿ ಸಮೀಪದ ಗಣೇಶ್ ಮೆಡಿಕಲ್ ಮುಂಭಾಗ ಸರಕಾರಿ ಸ್ಥಳಗಳಿದ್ದರೂ ಕೊರೋನಾ ವೈರಸ್ ನೆಪದಲ್ಲಿ ಸಾರ್ವಜನಿಕರ ಮತ್ತು ವ್ಯಾಪಾರಿಗಳ ತೀವ್ರ ವಿರೋಧದ  ನಡುವೆಯು  ಬಿಜೆಪಿ ಶಾಸಕರ ಒತ್ತಡದಿಂದಾಗಿ ಬೈಕಂಪಾಡಿಗೆ ಸ್ಥಳಾಂತರ ಮಾಡಲಾಗಿದೆ. ಆದರೆ ಬೈಕಂಪಾಡಿಗೆ ಮಾಲ್ ಕೊಂಡು ಹೋಗಲು ಪೋಲಿಸರು ಬಿಡುತ್ತಿಲ್ಲ ಪಾಸ್ ಕೇಳ್ತಾ ಇದ್ದಾರೆ, ಆದರೆ ಪಾಸ್ ಗಳು ದೊರಕುತ್ತಿಲ್ಲ. ಆದ್ದರಿಂದ ಈ ಹದಿನಾರು ಸಾವಿರ ಪಾಸ್ ಗಳು ಯಾರಿಗೆ ನೀಡಲಾಗಿದೆ ಎಂಬುದರ ಬಗ್ಗೆ ಸರಿಯಾದ ಮಾಹಿತಿ ಯಾರಿಗೂ ಇಲ್ಲ, ಅಥವಾ ರಾಜಕೀಯ ಪ್ರಭಾವದಿಂದ ಒಂದೇ ವಿಭಾಗದ ಕಡೆಗೆ ಹೋಗಿದೆಯಾ ಎಂಬ ಸಂಶಯವು ಮೂಡುತ್ತಿದೆ ಎಂದು ಹೇಳಿದರು.

ಲಾಕ್ ಡೌನ್ ಎ. 16ರ ನಂತರವು ಮುಂದುವರಿಯುವ ಲಕ್ಷಣಗಳು ಕಾಣುತ್ತಿದೆ. ಹಾಗೂ ಲಾಕ್ ಡೌನ್ ಹೇರಿ 17 ದಿನಗಳು ಕಳೆದರು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮಗಳನ್ನು ಪರಿಣಾಮಕಾರಿ ಗೊಳಿಸುವಲ್ಲಿ ವಿಫಲವಾಗುತ್ತಿರುವುದರಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರು ಇನ್ನಷ್ಟು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ದ.ಕ ಜಿಲ್ಲಾಡಳಿತ ಇವೆಲ್ಲಾ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News