×
Ad

ಕಾಸರಗೋಡು : 35 ಮಂದಿ ಕೊರೋನ ವೈರಸ್ ಸೋಂಕಿನಿಂದ ಗುಣಮುಖ

Update: 2020-04-11 19:39 IST

ಕಾಸರಗೋಡು : ಜಿಲ್ಲೆಯಲ್ಲಿ ಇದುವರೆಗೆ  35 ಮಂದಿ ಕೊರೋನ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಶನಿವಾರ 11 ಮಂದಿ ಗುಣಮುಖರಾಗಿದ್ದಾರೆ. 

ಶನಿವಾರ ಜಿಲ್ಲೆಯಲ್ಲಿ ಎರಡು ಪ್ರಕರಣ ದೃಢಪಟ್ಟಿದ್ದು , ಇಬ್ಬರು  10 ಮತ್ತು ಎಂಟು ವರ್ಷದ ಮಕ್ಕಳಾಗಿದ್ದಾರೆ.  ಮೊಗ್ರಾಲ್ ಪುತ್ತೂರು ನಿವಾಸಿ ಯಾದ ಇವರ ತಾಯಿಗೆ ಈ ಹಿಂದೆ ಸೋಂಕು ಕಂಡು ಬಂದಿತ್ತು. ಇದರಿಂದ ಈ ಇಬ್ಬರು  ಮಕ್ಕಳು ಆಸ್ಪತ್ರೆಯ ಐಸೋಲೇಷನ್ ವಾರ್ಡ್  ನಲ್ಲಿದ್ದರು. ಜಿಲ್ಲೆಯ ಐಸೋಲೇಷನ್ ವಾರ್ಡ್ ನಲ್ಲಿ 263 ಮಂದಿ ನಿಗಾದಲ್ಲಿದ್ದಾರೆ ಮತ್ತು 131 ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News