ನಿರಾಶ್ರಿತರ ಕೇಂದ್ರದಿಂದ ವಲಸೆ ಕಾರ್ಮಿಕ ನಾಪತ್ತೆ
Update: 2020-04-11 21:33 IST
ಕುಂದಾಪುರ, ಎ.11: ಕೋವಿಡ್ -19 ಹಿನ್ನೆಲೆಯಲ್ಲಿ ಕುಂದಾಪುರ ನೆಹರು ಮೈದಾನದ ಬಿ.ಸಿ.ಎಂ. ಹಾಸ್ಟೆಲ್ನಲ್ಲಿ ಸ್ಥಾಪಿಸಲಾಗಿರುವ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿದ್ದ ವಲಸೆ ಕಾರ್ಮಿಕ ರೊಬ್ಬರು ನಾಪತ್ತೆಯಾಗಿರುವ ಘಟನೆ ಎ.10ರಂದು ಮಧ್ಯಾಹ್ನ ವೇಳೆ ನಡೆದಿದೆ.
ನಾಪತ್ತೆಯಾದವರನ್ನು ಶೇಖರ(24) ಎಂದು ಗುರುತಿಸಲಾಗಿದೆ. ಗ್ರಾಮ ಲೆಕ್ಕಿಗ ಟಿ.ಪರಸಪ್ಪವಲಸೆ ಕಾರ್ಮಿಕರಿಗೆ ಆಹಾರ ಮತ್ತು ಇತರ ಸೌಕರ್ಯ ಪೂರೈಸುವ ಕರ್ತವ್ಯ ನಿರ್ವಹಿಸಿಕೊಂಡಿದ್ದು, ನಿರಾಶ್ರಿತರ ಕೇಂದ್ರದಲ್ಲಿದ್ದ ಶೇಖರ ಊಟಕ್ಕೆ ಬಾರದೆ ಇರುವುದರಿಂದ ರೂಮಿನಲ್ಲಿ ಹುಡುಕಾಡಿದಾಗ ಅವರು, ನಾಪತ್ತೆಯಾಗಿರುವುದು ತಿಳಿದುಬಂತು. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.