×
Ad

ಮೂಡುಬಿದಿರೆ: ನಕಲಿ ಪತ್ರಕರ್ತನ ವಿರುದ್ಧ ಪ್ರಕರಣ ದಾಖಲು

Update: 2020-04-11 22:09 IST

ಮೂಡುಬಿದಿರೆ : ನಕಲಿ ಪತ್ರಿಕೆಯ ಹೆಸರಿನಲ್ಲಿ ಸಾರ್ವಜನಿಕರು ಮತ್ತು ಸರಕಾರಿ ಅಧಿಕಾರಿಗಳನ್ನು ಬೆದರಿಸುತ್ತಿದ್ದ ವ್ಯಕ್ತಿಯೋರ್ವನ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ತಾಡಿ ನಿವಾಸಿ ಸುದತ್ತ ಜೈನ್ ಪ್ರಕರಣದ ಆರೋಪಿ.

ಈತ 'ಕಾರ್ಮಿಕ ವಾಣಿ' ಎಂಬ ಹೆಸರಿನ ಪತ್ರಿಕೆಯ ಸಂಪಾದಕ ಎಂದು ಹೇಳಿಕೊಂಡು ತಿರುಗಾಡುತ್ತಿದ್ದು, ಸರಕಾರಿ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಪತ್ರಕರ್ತನೆಂದು ಬೆದರಿಸುತ್ತಿದ್ದ ಎಂದು ಆರೋಪಿಸಲಾಗಿದೆ. 'ಬರೆಯುವುದು ನನ್ನ ವೃತ್ತಿ' , 'ನಾನು ಪ್ರಜಾಪ್ರಭುತ್ವದ ನಾಲ್ಕನೇ ಅಂಗ' ಎಂದು ಹೇಳುತ್ತ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಗಿಟ್ಟಿಸಿಕೊಂಡಿದ್ದ ಎಂದು ತಿಳಿದುಬಂದಿದೆ.

ಯಾವುದೇ ಮಾಧ್ಯಮದ ಪ್ರತಿನಿಧಿಯಾಗಿರದೆ ಪತ್ರಕರ್ತನೆಂದು ಸಾರ್ವಜನಿಕರನ್ನು ಯಾಮಾರಿಸಿ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿರುವ ಬಗ್ಗೆ ದೂರಿನಲ್ಲಿ ವಿವರಿಸಲಾಗಿದೆ. ವಾಟ್ಸಾಪ್, ಪೇಸ್‍ಬುಕ್ ಖಾತೆ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ ಮಾಧ್ಯಮ ಮತ್ತು ಸರಕಾರಿ ಅಧಿಕಾರಿಗಳ ವಿರುದ್ಧ ಅವಹೇಳನಕಾರಿ ಸಂದೇಶ ಬರೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಸುದತ್ತ ಜೈನ್ ಜೊತೆ ಇನ್ನೂ ಹಲವರು ನಕಲಿ ಪತ್ರಿಕೋಧ್ಯಮದಲ್ಲಿ ಶಾಮೀಲಾಗಿರುವ ಬಗ್ಗೆ ಮೂಡುಬಿದರೆ ಪ್ರೆಸ್‍ಕ್ಲಬ್ ಅಧ್ಯಕ್ಷ ವೇಣುಗೋಪಾಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಸಂಶಯ ವ್ಯಕ್ತಪಡಿಸಿದ್ದು, ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದು, ಪತ್ರಕರ್ತರ ಮತ್ತು ಸಮಾಜದ ಹಿತ ಕಾಪಾಡುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕರು ನಕಲಿ ಪತ್ರಕರ್ತರ ಬಗ್ಗೆ ಪ್ರೆಸ್‍ಕ್ಲಬ್ ಅಥವಾ ಪೊಲೀಸರಿಗೆ ದೂರು ನೀಡುವಂತೆ ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News