ಕ್ವಾರೆಂಟೈನ್ ಕೇಂದ್ರವಾಗಿ ದಾರುನ್ನೂರ್ ಹಾಸ್ಟೆಲ್ ಕಟ್ಟಡ
Update: 2020-04-11 22:13 IST
ಮಂಗಳೂರು, ಎ.11: ಶಹೀದ್ ಸಿ.ಎಂ. ಅಬ್ದುಲ್ಲಾ ಮುಸ್ಲಿಯಾರ್ ಫೌಂಡೇಶನ್ ಕರ್ನಾಟಕ (ರಿ) ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಕಾಶಿಪಟ್ಟದಲ್ಲಿರುವ ದಾರುನ್ನೂರ್ ಎಜುಕೇಶನ್ ಸೆಂಟರ್‌ನ ಹಾಸ್ಟೆಲ್ ಕಟ್ಟಡವನ್ನು ಕ್ವಾರೆಂಟೈನ್ ಕೇಂದ್ರವಾಗಿ ಉಪಯೋಗಿಸಲು ಮತ್ತು ಇದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರಗಳನ್ನು ಸರಕಾರಕ್ಕೆ ನೀಡುವುದಾಗಿ ಸಂಸ್ಥೆಯ ಅಧ್ಯಕ್ಷ, ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್-ಅಝ್ಹರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.