×
Ad

ಕೊರೋನವೈರಸ್‌ಗೆ ಸೆಪ್ಟಂಬರ್ ವೇಳೆಗೆ ಲಸಿಕೆ: ಬ್ರಿಟನ್ ವಿಜ್ಞಾನಿ

Update: 2020-04-11 22:49 IST
ಸಾಂದರ್ಭಿಕ ಚಿತ್ರ

ಲಂಡನ್, ಎ. 11: ನೋವೆಲ್-ಕೊರೋನವೈರಸ್ ವಿರುದ್ಧದ ಲಸಿಕೆ ಸೆಪ್ಟಂಬರ್ ವೇಳೆಗೆ ಸಿದ್ಧಗೊಳ್ಳಬಹುದು ಎಂದು ಬ್ರಿಟನ್‌ನ ಔಷಧ ಸಂಶೋಧನಾ ತಂಡಗಳ ಪೈಕಿ ಮುಂಚೂಣಿಯಲ್ಲಿರುವ ತಂಡವೊಂದರ ಮುಖ್ಯಸ್ಥೆ ಹೇಳಿದ್ದಾರೆ.

“ಈ ಔಷಧವು ಪರಿಣಾಮಕಾರಿಯಾಗುತ್ತದೆ ಎಂಬ ಬಗ್ಗೆ ನನಗೆ 80 ಶೇಕಡ ವಿಶ್ವಾಸವಿದೆ” ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದಲ್ಲಿ ಲಸಿಕೆ ಶಾಸ್ತ್ರದ ಪ್ರೊಫೆಸರ್ ಆಗಿರುವ ವಿಜ್ಞಾನಿ ಸಾರಾ ಗಿಲ್ಬರ್ಟ್ ‘ದ ಟೈಮ್ಸ್’ ಪತ್ರಿಕೆಗೆ ಶನಿವಾರ ತಿಳಿಸಿದರು.

ಲಸಿಕೆಗಳನ್ನು ಅಭಿವೃದ್ಧಿಪಡಿಸಲು ವರ್ಷಗಳೇ ಬೇಕಾಗುತ್ತವೆ ಹಾಗೂ ಕೊರೋನವೈರಸ್‌ಗೆ ಲಸಿಕೆ ತಯಾರಿಸಲು ಕನಿಷ್ಠ 12ರಿಂದ 18 ತಿಂಗಳು ಬೇಕಾಗಬಹುದು ಎಂಬುದಾಗಿ ಪರಿಣತರು ಎಚ್ಚರಿಸಿದ್ದಾರೆ.

ಕೊರೋನವೈರಸ್ ಕಾಯಿಲೆಗೆ ಲಸಿಕೆ ಕಂಡು ಹಿಡಿಯಲು ಜಗತ್ತಿನಾದ್ಯಂತ ಹತ್ತಾರು ತಂಡಗಳು ಶ್ರಮಿಸುತ್ತಿವೆ. ಈ ಪೈಕಿ ಗಿಲ್ಬರ್ಟ್‌ರ ತಂಡವೂ ಒಂದು. ಲಸಿಕೆಯ ಮಾನವ ಪ್ರಯೋಗಗಳು ಇನ್ನೆರಡು ವಾರಗಳಲ್ಲಿ ಆರಂಭಗೊಳ್ಳುತ್ತವೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News