×
Ad

ಮುಂಬೈ ತಾಜ್ ಹೋಟೆಲ್‌ನ ಆರು ಉದ್ಯೋಗಿಗಳಿಗೆ ಕೊರೋನ ವೈರಸ್ ದೃಢ

Update: 2020-04-12 09:59 IST

 ಮುಂಬೈ,ಎ.12:ದಕ್ಷಿಣ ಮುಂಬೈನ ಕೊಲಬಾದಲ್ಲಿರುವ ಪ್ರತಿಷ್ಠಿತ ತಾಜ್‌ಮಹಲ್ ಪ್ಯಾಲೇಸ್ ಹಾಗೂ ತಾಜ್‌ಮಹಲ್ ಟವರ್ಸ್ ಹೋಟೆಲ್‌ನ ಕನಿಷ್ಠ ಆರು ಉದ್ಯೋಗಿಗಳಿಗೆ ಕೊರೋನ ವೈರಸ್ ದೃಢಪಟ್ಟಿದೆ ಎಂದು ಖಾಸಗಿ ಆಸ್ಪತ್ರೆಯ ವೈದ್ಯರು ಶನಿವಾರ ತಿಳಿಸಿದ್ದಾರೆ.

ನಮ್ಮ ಕೆಲವು ಉದ್ಯೋಗಿಗಳಲ್ಲಿ ಕೊರೋನವೈರಸ್ ಇರುವುದು ದೃಢಪಟ್ಟಿದೆ ಎಂದು ತಾಜ್ ಹೊಟೇಲ್ ಸಮೂಹದ ಆಡಳಿತ ನೋಡಿಕೊಳ್ಳುತ್ತಿರುವ ಇಂಡಿಯನ್ ಹೋಟೆಲ್ ಕಂಪೆನಿ(ಎನ್‌ಎಚ್‌ಸಿ)ತಿಳಿಸಿದೆ. ಆದರೆ, ಎಷ್ಟು ಮಂದಿ ಉದ್ಯೋಗಿಗಳಿಗೆ ವೈರಸ್ ದೃಢಪಟ್ಟಿದೆ ಎಂದು ಖಚಿತಪಡಿಸಿಲ್ಲ.

ವಿವಿಧ ಸರಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಆರೋಗ್ಯ ಕೆಲಸಗಾರರನ್ನು ತಮ್ಮ ಉದ್ಯೋಗಿಗಳ ಚಿಕಿತ್ಸೆಗೆ ಹೊಟೇಲ್ ಕಂಪೆನಿ ಬಳಸಿಕೊಂಡಿದೆ.

ತಾಜ್ ಹೋಟೆಲ್‌ನ ಆರು ಉದ್ಯೋಗಿಗಳನ್ನು ಬಾಂಬೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರೂ ಚೇತರಿಸಿಕೊಳ್ಳುತಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಬಾಂಬೆ ಆಸ್ಪತ್ರೆಯ ವೈದ್ಯ ಡಾ.ಗೌತಮ್ ಭನ್ಸಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News