×
Ad

ಮಲ್ಪೆ: ಐದು ದಿನಗಳ ಅವಧಿಯಲ್ಲಿ ಒಂದೇ ಮನೆಯ ಇಬ್ಬರು ಮಕ್ಕಳು ಮೃತ್ಯು!

Update: 2020-04-12 21:21 IST

ಮಲ್ಪೆ, ಎ.7: ಮಲ್ಪೆಯ ಸುಮಯ್ಯ ಬಾನು ಎಂಬವರ ಎರಡು ತಿಂಗಳ ಮಗು ಮೃತಪಟ್ಟ ಐದೇ ದಿನದಲ್ಲಿ ಆರು ವರ್ಷದ ಮಗಳು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಎ.6ರಂದು ಮಧ್ಯರಾತ್ರಿ ವೇಳೆ ಇವರ ಎರಡು ತಿಂಗಳ ಗಂಡು ಮಗು ಸವುದ್ ನ್ಯೂಮೋನಿಯಾ ಕಾಯಿಲೆಯಿಂದ ಮೃತಪಟ್ಟಿರುವುದಾಗಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಮಗು ಮೃತಪಟ್ಟ ಐದು ದಿನದ ನಂತರ ಅಂದರೆ ಎ.10ರಂದು ರಾತ್ರಿ ವೇಳೆ ಮಗಳು ಆಯಿಷಾ (4) ಎಂಬಾಕೆ ಮನೆಯ ಬಕೆಟ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಳೆಂದು ದೂರಲಾಗಿದೆ.

ಈ ಬಗ್ಗೆಯೂ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಮೃತ ಎರಡು ಮಕ್ಕಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೂ ಕಳುಹಿಸಲಾಗುವುದು. ಮಕ್ಕಳ ಸಾವಿನ ಬಗ್ಗೆ ಸಂಶಯಗಳು ಕೇಳಿ ಬಂದರು ಕೂಡ ವರದಿ ಕೈಸೇರಿದ ಬಳಿಕವಷ್ಟೇ ಈ ಕುರಿತು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮಲ್ಪೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News