×
Ad

ಅಮೆರಿಕ ತಲುಪಿದ ಹೈಡ್ರಾಕ್ಸಿಕ್ಲೋರೋಕ್ವಿನ್

Update: 2020-04-12 23:41 IST

ವಾಶಿಂಗ್ಟನ್, ಎ. 12: ಕೋವಿಡ್-19 ಕಾಯಿಲೆಗೆ ಔಷಧ ಎಂಬುದಾಗಿ ಪರಿಗಣಿಸಲಾಗಿರುವ ಹೈಡ್ರಾಕ್ಸಿಕ್ಲೋರೋಕ್ವಿನ್ ಸರಕು ಭಾರತದಿಂದ ಅಮೆರಿಕ ತಲುಪಿದೆ. ಔಷಧಿಯ ರಫ್ತಿನ ಮೇಲಿನ ನಿಷೇಧವನ್ನು ಭಾರತ ತೆಗೆದ ಕೆಲವೇ ದಿನಗಳ ಬಳಿಕ ಅದು ಅಮೆರಿಕಕ್ಕೆ ರವಾನೆಯಾಗಿದೆ.

ಈ ವಾರದ ಆದಿ ಭಾಗದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಒತ್ತಡಕ್ಕೆ ಒಳಗಾಗಿ ಭಾರತವು ಔಷಧದ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸಿತ್ತು ಹಾಗೂ ಅಮೆರಿಕಕ್ಕೆ 35.82 ಲಕ್ಷ ಹೈಡ್ರಾಕ್ಸಿಕ್ಲೋರೋಕ್ವಿನ್ ಗುಳಿಗೆಗಳ ರಫ್ತಿಗೆ ಅನುಮೋದನೆ ನೀಡಿತ್ತು. ಅದರ ಜೊತೆಗೆ ಅಮೆರಿಕದಲ್ಲೇ ಗುಳಿಗೆ ತಯಾರಿಸಲು ಸಾಧ್ಯವಾಗುವಂತೆ ಒಂಭತ್ತು ಮೆಟ್ರಿಕ್ ಟನ್ ಕಚ್ಚಾವಸ್ತುಗಳನ್ನೂ ಕಳುಹಿಸಿಕೊಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News