×
Ad

28 ​​ಪ್ರಕರಣಗಳೊಂದಿಗೆ ಕೊರೋನ ವೈರಸ್ ಹಾಟ್‌ಸ್ಪಾಟ್ ಆದ ದಿಲ್ಲಿಯ ಕ್ಯಾನ್ಸರ್ ಆಸ್ಪತ್ರೆ!

Update: 2020-04-13 12:41 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಎ.13: ಕೊರೋನ ವೈರಸ್ ಹಾಟ್‌ಸ್ಪಾಟ್ ಆಗಿ ಮಾರ್ಪಟ್ಟಿರುವ ದಿಲ್ಲಿಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇದುವರೆಗೆ 28 ​​ಪ್ರಕರಣಗಳು ದಾಖಲಾಗಿದೆ. ಸೋಮವಾರ 3 ಹೊಸ ಪ್ರಕರಣಗಳು ವರದಿಯಾಗಿವೆ.

ಇಲ್ಲಿನ  ವೈದ್ಯರೊಬ್ಬರು  ವಿದೇಶದಿಂದ ಹಿಂದಿರುಗಿದ ತನ್ನ ಸಹೋದರನಿಂದ  ಕೊರೋನ ಸೋಂಕಿಗೆ ಒಳಗಾಗಿದ್ದರು.

ದಿಲ್ಲಿಯ ರಾಜ್ಯ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ  ಚಿಕಿತ್ಸೆ ಪಡೆಯುತ್ತಿದ್ದ  ರೋಗಿ, ಅಟೆಂಡೆಂಟ್ ಮತ್ತು ಒಬ್ಬ ಭದ್ರತಾ ಸಿಬ್ಬಂದಿಗೆ ಸೋಂಕು ತಗಲಿರುವುದು ಬೆಳಕಿಗೆ ಬಂದಿದೆ.

ಈಗಾಗಲೇ ಮೂರು ಕ್ಯಾನ್ಸರ್ ರೋಗಿಗಳು ಮತ್ತು ಮೂವರು ವೈದ್ಯರು ಸೇರಿದಂತೆ 22  ಮಂದಿಗೆ ಸೋಂಕು ತಗಲಿದ್ದ ಆಸ್ಪತ್ರೆಯನ್ನು ಎಪ್ರಿಲ್ 1 ರಂದು ಮುಚ್ಚಲಾಗಿತ್ತು.

ವೈದ್ಯರೊಬ್ಬರ ಸಹೋದರ ಮತ್ತು ಅತ್ತಿಗೆ ಯುಕೆಯಿಂದ ಹಿಂದಿರುಗಿದ್ದರು. ಅವರನ್ನು ಭೇಟಿಯಾಗಿದ್ದ ವೈದ್ಯರೊಬ್ಬರಲ್ಲಿ ಕೊರೋನ ವೈರಸ್ ಸೋಂಕು ಕಂಡು ಬಂದಿತ್ತು ಎಂದು ದಿಲ್ಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ತಿಳಿಸಿದ್ದಾರೆ.

ಕೋವಿಡ್ -19  ಪರೀಕ್ಷೆಯ ನಂತರ ಹಲವು ಮಂದಿ ಕ್ಯಾನ್ಸರ್ ರೋಗಿಗಳನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  ದಿಲ್ಲಿಯಲ್ಲಿ 1,154 ಸೋಂಕು ಪ್ರಕರಣಗಳು ಪತ್ತೆಯಾಗಿದೆ .ಈ ಪೈಕಿ 24 ಮಂದಿ ಮೃತಪಟ್ಟಿದ್ದಾರೆ.

ಭಾರತದಲ್ಲಿ ಕೊರೋನ ವೈರಸ್ ಸೋಂಕು ಪ್ರಕರಣಗಳ ಸಂಖ್ಯೆ 9,152ಕ್ಕೆ ಏರಿದೆ.  308 ಸಾವು ಸಂಭವಿಸಿದೆ. ಕಳೆದ 24 ಗಂಟೆಗಳಲ್ಲಿ 35 ಸಾವಿನ ಪ್ರಕರಣಗಳು  ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News