×
Ad

ಶಾಸಕ ಐವನ್ ರಿಂದ ದಿನಸಿ ಸಾಮಗ್ರಿಗಳ ವಿತರಣೆ

Update: 2020-04-13 13:40 IST

ಮಂಗಳೂರು, ಎ.13: ಮಂಗಳೂರು ಮಹಾನಗರ ಪಾಲಿಕೆಯ ಬೋಳಾರ ಮತ್ತು ಹೊಯ್ಗೆ ಬಜಾರ್, ಅತ್ತಾವರ ಪ್ರದೇಶಗಳ ಕಾಲನಿಗಳಲ್ಲಿ ಅರ್ಹರಿಗೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅಕ್ಕಿ ಮತ್ತು ದಿನಸಿ ವಸ್ತುಗಳನ್ನು ವಿತರಣೆ ಮಾಡಿದರು.

ಕಾರ್ಮಿಕರಿಗೆ, ದಿನಕೂಲಿ ನೇಕಾರರಿಗೆ, ಮನೆ ಕೆಲಸ ಮಾಡುವವರಿಗೆ ರಾಜ್ಯ ಸರಕಾರದಿಂದ ಪ್ಯಾಕೇಜ್ ಒಂದನ್ನು ನೀಡುವ ಅಗತ್ಯವಿದ್ದು, ಸರಕಾರ ಕೂಡಲೇ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭ ಮುಖ್ಯಮಂತ್ರಿಯನ್ನು ಒತ್ತಾಯಿಸಿದ್ದಾರೆ.

ಅದೇರೀತಿ ಕೂಲಿ ಕಾರ್ಮಿಕರಿಗೆ, ಪಡಿತರ ಚೀಟಿ ಇಲ್ಲದವರಿಗೆ ಕೂಡಲೇ ಪಡಿತರ ವ್ಯವಸ್ಥೆಯನ್ನು ಬಿಪಿಎಲ್ ಮಾದರಿಯಲ್ಲಿ ನೀಡುವಂತೆ ಆದೇಶ ಹೊರಡಿಸಬೇಕಾಗಿ ಸರಕಾರವನ್ನು ಐವನ್ ಒತ್ತಾಯಿಸಿದ್ದಾರೆ.

  ಈ ಕಿಟ್ ವಿತರಣೆ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಕವಿತಾ ವಾಸು, ಟೀಕೆ ಸುಧೀರ್, ಯುವ ನಾಯಕರಾದ ರಮಾನಂದ ಪೂಜಾರಿ, ನೀರಜ್ ಪಾಲ್, ಡಿ ಹಬೀಬುಲ್ಲಾ, ಅಲೆಸ್ಟಿನ್ ಡಿಕುನ್ಹ, ಪಿಯೂಸ್ ಮೊಂತೇರೊ, ಸಲೀಂ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News