ಚೆಂಬುಗುಡ್ಡೆಯಲ್ಲಿ ಸಾರ್ವಜನಿಕರಿಗೆ ಕೊರೋನ ಪರೀಕ್ಷೆ
Update: 2020-04-13 14:24 IST
ಮಂಗಳೂರು, ಎ.13: ಉಳ್ಳಾಲ ನಗರಸಭೆ ವ್ಯಾಪ್ತಿಯ ಚೆಂಬುಗುಡ್ಡೆ ಪರಿಸರದ ವ್ಯಕ್ತಿಯೊಬ್ಬರಲ್ಲಿ ಇತ್ತೀಚೆಗೆ ಕೊರೋನ ಸೋಂಕು ಕಂಡುಬಂದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸ್ಥಳೀಯರಿಗೆ ಕೋವಿಡ್-19 ಪರೀಕ್ಷೆಗೆ ಚೆಂಬುಗುಡ್ಡೆ ಮಸೀದಿ ಆವರಣದಲ್ಲಿ ಸೋಮವಾರ ವ್ಯವಸ್ಥೆ ಕಲ್ಪಿಸಲಾಗಿತ್ತು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಕೊರೋನ ಸೋಂಕಿನ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ಸ್ಥಳೀಯರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಯಿತು. ಹಲವರು ಇದರ ಪ್ರಯೋಜನ ಪಡೆದರು.
ಮಂಗಳೂರು ಕ್ಷೇತ್ರದ ಶಾಸಕ ಯು.ಟಿ.ಖಾದರ್ ಸ್ವತಃ ಪರೀಕ್ಷೆಗೊಳಗಾದರು. ಹಾಗೂ ಸಾರ್ವಜನಿಕರಿಗೆ ಪರೀಕ್ಷೆಗೆ ಒಳಗಾಗಲು ಧೈರ್ಯ ತುಂಬಿದರು.