ಸಿಂಗಾಪುರ: 59 ಭಾರತೀಯರಲ್ಲಿ ಕೊರೋನ ಸೋಂಕು

Update: 2020-04-13 14:52 GMT
ಸಾಂದರ್ಭಿಕ ಚಿತ್ರ

ಸಿಂಗಾಪುರ, ಎ. 13: ಸಿಂಗಾಪುರದಲ್ಲಿ ಹೊಸದಾಗಿ 233 ಮಂದಿಯಲ್ಲಿ ನೂತನ-ಕೊರೋನ ವೈರಸ್ ಸೋಂಕು ಕಾಣಸಿಕೊಂಡಿದ್ದು, ಈ ಪೈಕಿ 59 ಮಂದಿ ಭಾರತೀಯರಾಗಿದ್ದಾರೆ.

ಇದರೊಂದಿಗೆ ದೇಶದಲ್ಲಿ ಕೋವಿಡ್-19 ರೋಗಿಗಳ ಒಟ್ಟು ಸಂಖ್ಯೆ 2,532ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಈಗ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯತ್ತಿರುವ 976 ಸೋಂಕಿತರ ಪೈಕಿ 31 ಮಂದಿಯ ಸ್ಥಿತಿ ಗಂಭೀರವಾಗಿದೆ ಹಾಗೂ ಅವರು ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಿಂಗಾಪುರದಲ್ಲಿ ಈವರೆಗೆ 8 ಮಂದಿ ಕೊರೋನ ವೈರಸ್‌ಗೆ ಬಲಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News