ವಾರಸುದಾರರಿಗೆ ಸೂಚನೆ
Update: 2020-04-13 20:31 IST
ಉಡುಪಿ, ಎ.13: ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ ಚೀಣಿಕಲ್ಲು ಅರಣ್ಯ ಪ್ರದೇಶದಲ್ಲಿ ಸುಮಾರು 50 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತ ಶರೀರ ಎ.12ರಂದು ಬೆಳಗ್ಗೆ 10 ಗಂಟೆಗೆ ಕಂಡು ಬಂದಿದೆ. ಮೃತ ವ್ಯಕ್ತಿಯು 5.3 ಅಡಿ ಎತ್ತರವಿದ್ದು, ಕಪ್ಪು ಬಣ್ಣದ ಪ್ಯಾಂಟ್ ಮತ್ತು ನೇರಳ ಬಣ್ಣದ ಶರ್ಟ್ ಧರಿಸಿದ್ದು, ಶರೀರವು ಕೊಳೆತ ಸ್ಥಿತಿಯಲ್ಲಿದೆ. ಅಲ್ಲೇ ಅಪರಿಚಿತ ಶವದ ಹಲ್ಲಿ ಸೆಟ್ ಮತ್ತು ವಾಚ್ ಸಹ ಸಿಕ್ಕಿದೆ.
ಇವರ ವಾರಸುದಾರರು ಯಾರಾದರೂ ಇದ್ದಲ್ಲಿ ಉಡುಪಿ ಪೊಲೀಸ್ ಕಂಟ್ರೋಲ್ ರೂಂ. 0820-2526444, ಶಂಕರನಾರಾಯಣ ಪೊಲೀಸ್ ಠಾಣೆ 08259-280299, ಪಿಎಸೈ ಶಂಕರನಾರಾಯಣ ಪೊಲೀಸ್ ಠಾಣೆ: 9480805456 ಇವರನ್ನು ಸಂರ್ಕಿಸುವಂತೆ ಶಂಕರನಾರಾಯಣ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.