ಕೇರಳ ಮೂವರು ರೋಗಿಗಳಿಗೆ ಕೆ.ಎಸ್.ಹೆಗ್ಡೆಯಲ್ಲಿ ಚಿಕಿತ್ಸೆ
ಮಂಗಳೂರು, ಎ.13: ತಲಪಾಡಿ ಗಡಿ ತೆರವಿನ ಬಳಿಕ ಕಾಸರಗೋಡು ಜಿಲ್ಲೆಯಿಂದ ತುರ್ತು ಚಿಕಿತ್ಸೆಗಾಗಿ ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಅದರಂತೆ ಕಾಸರಗೋಡು ಜಿಲ್ಲೆಯ ತಸ್ಲೀಮಾ ಎಂಬವರು ಎ. 8ರಂದು ತೀವ್ರವಾದ ತಲೆನೋವಿನ ಸಂಬಂಧ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಹಿಂದಿರುಗಿರುತ್ತಾರೆ. ಬಿಫಾತಿಮಾ ಎಂಬವರು ಕೂಡ ಎ.8 ರಂದು ಹೃದಯ ಸಂಬಂಧಿ ಖಾಯಿಲೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ರೀಶಾನ ಎಂಬಾಕೆ ತೀವ್ರವಾದ ಹೊಟ್ಟೆನೋವಿಗೆ ಸಂಬಂಧಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹಿಂದಿರುಗಿರು ತ್ತಾರೆ. ಜೈನಾಬಿ ಎಂಬವರು ತಲೆನೋವು ಮತ್ತು ವಾಂತಿ ಇರುವ ಕಾರಣ ಈ ಆಸ್ಪತ್ರೆಗೆ ಬಂದಿದ್ದು, ಚಿಕಿತ್ಸೆಗಾಗಿ ದಾಖಲಾಗಲು ಸೂಚಿಸಿದ್ದರೂ ಅದನ್ನು ನಿರಾಕರಿಸಿ ಹಿಂದಿರುಗಿರುತ್ತಾರೆ.
ಈ ಎಲ್ಲಾ ಪ್ರಕರಣಗಳು ಕೋವಿಡ್-19ಕ್ಕೆ ಸಂಬಂಧಪಟ್ಟಿರುವುದಿಲ್ಲ ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯ ಪ್ರಕಟನೆ ತಿಳಿಸಿದೆ.