ಮಿಥುನ್ ರೈ ಹೇಳಿಕೆ ಖಂಡನೀಯ: ಸಿಎಫ್‌ಐ
ಮಂಗಳೂರು, ಎ.13: ಕೊರೋನ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್ ಘೋಷಿಸಿರುವ ಪರಿಣಾಮ ಕರ್ನಾಟಕ-ಕೇರಳದ ತಲಪಾಡಿ ಗಡಿಯನ್ನು ದ.ಕ.ಜಿಲ್ಲಾಡಳಿತ ಮುಚ್ಚಿದ್ದನ್ನು ಸಮರ್ಥಿಸಿ ದ.ಕ.ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ನೀಡುತ್ತಿರುವ ಹೇಳಿಕೆ ಖಂಡನೀಯ ಎಂದು ಸಿಎಫ್‌ಐ ದ.ಕ.ಜಿಲ್ಲಾ ಸಮಿತಿ ತಿಳಿಸಿದೆ.
ಕಾಸರಗೋಡಿನ ಜನರು ವೈದ್ಯಕೀಯ ವಿಚಾರಗಳಿಗೆ ಮಂಗಳೂರನ್ನೇ ಜಾಸ್ತಿ ಅವಲಂಬಿಸಿದ್ದ ಕಾರಣ ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದರು. ಸುಪ್ರೀಂ ಕೋರ್ಟ್‌ನ ಸೂಚನೆಯ ಬಳಿಕ ಕಾಸರಗೋಡು ಜಿಲ್ಲೆಯ ಜನರು ತುರ್ತು ವೈದ್ಯಕೀಯ ಚಿಕಿತ್ಸೆಗಳಿಗೆ ಜಿಲ್ಲೆಯನ್ನು ಪ್ರವೇಶ ಮಾಡ ಲಾರಂಭಿಸಿದರೂ ಜಿಲ್ಲಾಡಳಿತ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಮಾತ್ರ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿರುವುದರ ಮಧ್ಯೆಯೇ ಮಿಥುನ್ ಗಡಿ ತೆರವು ವಿಚಾರದಲ್ಲಿ ನ್ಯಾಯಾಲಯದ ಮೆಟ್ಟಲೇರಿ ಮುಜುಗರಕ್ಕೊಳಗಾಗಿದ್ದಾರೆ. ರಾಜ್ಯವಿಡೀ ಕೊರೋನ ರೋಗದ ಚಿಂತೆಯಲ್ಲಿ ರುವಾಗ ಮಿಥುನ್ ರೈ ಮಾತ್ರ ತನ್ನ ರಾಜಕೀಯ ಬೇಳೆ ಬೇಯಿಸುತ್ತಿರುವುದು ಖಂಡನೀಯ. ಜಿಲ್ಲೆಯ ಒಂದಕ್ಕಿಂತ ಹೆಚ್ಚು ಆಸ್ಪತ್ರೆಗಳಲ್ಲಿ ಕಾಸರಗೋಡಿನ ಜನರಿಗೆ ಚಿಕಿತ್ಸೆ ಪಡೆಯಲು ಅವಕಾಶ ನೀಡಿದರೆ ಜಿಲ್ಲಾಡಳಿತದ ವಿರುದ್ಧ ಹೋರಾಡುತ್ತೇನೆ ಎಂಬ ಹೇಳಿಕೆಯು ಬಾಲಿಶ ವಾಗಿದೆ. ಬಹುಸಂಖ್ಯಾತರನ್ನು ಓಲೈಸಲು ಮಿಥುನ್ ರೈ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ಸಿಎಫ್‌ಐ ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ಆರೋಪಿಸಿದ್ದಾರೆ.